janadhvani

Kannada Online News Paper

ಉಳ್ಳಾಲ ಸಯ್ಯಿದ್ ಶರೀಫುಲ್ ಮದನಿ ದರ್ಗಾ- ನೂತನ ಅಧ್ಯಕ್ಷರಾಗಿ ಹನೀಫ್ ಹಾಜಿ ಆಯ್ಕೆ

ಉಪಾಧ್ಯಕ್ಷರಾಗಿ ರೈಟ್ ವೇ ಅಶ್ರಫ್, ಪ್ರಧಾನ ಕಾರ್ಯದರ್ಶಿಯಾಗಿ ಶಿಹಾಬುದ್ದೀನ್ ಸಖಾಫಿ ಹಾಗೂ ಕೊಶಾಧಿಕಾರಿಯಾಗಿ ನಾಝಿಂ ಕೋಟೆಪುರ ಆಯ್ಕೆಗೊಂಡಿದ್ದಾರೆ

ಉಳ್ಳಾಲ: ಇಲ್ಲಿನ ಇತಿಹಾಸ ಪ್ರಸಿದ್ಧ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ದರ್ಗಾ ಮತ್ತು ಕೇಂದ್ರ ಜುಮಾ ಮಸೀದಿ(402) ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ.ಜಿ.ಹನೀಫ್ ಹಾಜಿ ಆಯ್ಕೆಗೊಂಡಿದ್ದಾರೆ.

ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಆಯ್ಕೆಗಾಗಿ ಇತ್ತೀಚೆಗೆ ವಖ್ಫ್ ಬೋರ್ಡ್ ಚುನಾವಣೆಯನ್ನು ನಡೆಸಿತ್ತು. ಇದರ ಪ್ರಕಾರ ಇಂದು ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಹೆಚ್ಚು ಮತಗಳನ್ನು ಪಡೆದು, ಹನೀಫ್ ಹಾಜಿಯವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಅವರು ಮೇಲಂಗಡಿ ಮೊಹಲ್ಲಾದಿಂದ ಸ್ಪರ್ಧಿಸಿದ್ದರು.

ಸಮಿತಿಯ ಉಪಾಧ್ಯಕ್ಷರಾಗಿ ಅಳೇಕಲ ಮೊಹಲ್ಲಾದ ರೈಟ್ ವೇ ಅಶ್ರಫ್,
ಪ್ರಧಾನ ಕಾರ್ಯದರ್ಶಿಯಾಗಿ ಮೇಲಂಗಡಿಯ ಶಿಹಾಬುದ್ದೀನ್ ಸಖಾಫಿ ಹಾಗೂ ಕೊಶಾಧಿಕಾರಿಯಾಗಿ ಮುಕ್ಕಚೇರಿ ಮೊಹಲ್ಲಾದ ನಾಝಿಂ ಕೋಟೆಪುರ ಆಯ್ಕೆಗೊಂಡಿದ್ದಾರೆ. ಸಂಪೂರ್ಣ ಮಾಹಿತಿಯು ಇನ್ನಷ್ಟೇ ಹೊರಬೀಳಲಿದೆ.

ಕೋಟೆಪುರ, ಮೇಲಂಗಡಿ, ಮುಕ್ಕಚೇರಿ, ಅಳೇಕಲ, ಕಲ್ಲಾಪು ಹೀಗೆ 5 ಕರಿಯ (ವಲಯ)ಗಳಿಂದ ತಲಾ 11 ಮಂದಿಯಂತೆ 55 ಮಂದಿ ಸದಸ್ಯರ ಆಯ್ಕೆಗೆ 80 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

2016-17 ನೇ ಸಾಲಿನಲ್ಲಿ ನ್ಯಾಯಯುತವಾದ ಚುನಾವಣೆ ನಡೆಯದೆ ಅನಧಿಕೃತವಾಗಿ ಆಡಳಿತವನ್ನು ವಶಪಡಿಸಿಕೊಂಡು ಸ್ವಯಂ ಘೋಷಿತವಾಗಿ ಪದಾಧಿಕಾರಿಗಳನ್ನು ನೇಮಿಸಿ ಪ್ರಸ್ತುತ ವಜಾಗೊಂಡಿರುವ ಅಬ್ದುಲ್‌ ರಶೀದ್ ಮತ್ತು ಸಹವರ್ತಿಗಳು ಕಳೆದ 7ವರೆ ವರ್ಷದಿಂದ ಕಾನೂನು ಉಲ್ಲಂಘನೆ, ಅವ್ಯವಹಾರ, ಭ್ರಷ್ಟಾಚಾರ, ದಬ್ಬಾಳಿಕೆ, ಸರ್ವಾಧಿಕಾರ ಮತ್ತು ಸಮಾಜಘಾತುಕ ಶಕ್ತಿಗಳ ಪೋಷಣೆಯನ್ನು ನಡೆಸುತ್ತಾ ಬಂದಿತ್ತು.

ಕರ್ನಾಟಕ ಸರಕಾರದ 2011 ರ ಸುತ್ತೋಲೆ ಮತ್ತು ಕರ್ನಾಟಕ ವಕ್ಫ್ ಮಂಡಳಿಯ ನಿರ್ಣಯ ಮತ್ತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಇವುಗಳಿಗೆ ವಿರುದ್ಧವಾಗಿ ಮದ್ರಸಾ ಪಠ್ಯ ಪುಸ್ತಕಗಳನ್ನು ಬದಲಸಿ, ಊರಿನಲ್ಲಿ ಗೊಂದಲ ಗಲಾಟೆಗಳಿಗೆ ಸ್ವಯಂಘೋಷಿತ ಸಮಿತಿಯು ಕಾರಣವಾಗಿತ್ತು.

error: Content is protected !! Not allowed copy content from janadhvani.com