ಚಿಕ್ಕಮಗಳೂರು. ಪೆಬ್ರುವರಿ 25 ರಂದು ನಗರದ ಪ್ರತಿಷ್ಠಿತ ಸಂಸ್ಥೆಯಾದ ಜಾಮಿಯಾ ಅರೇಬಿಯ ಕಂಜೂಲ್ ಈಮಾನ್ ವತಿಯಿಂದ ಏರ್ಪಿಸಲಾಗಿದ್ದ ಬೃಹತ್ ಸುನ್ನಿ ಮಹಾ ಸಮ್ಮೇಳನದಲ್ಲಿ ನಿರೀಕ್ಷೆ ಗೂ ಮೀರಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಯಶಸ್ವಿಯಾಗಿ ಕಾರ್ಯಕ್ರಮವು ಐತಿಹಾಸಿಕವಾಗಿ ಉಳಿದುಕೊಂಡಿದೆ ಈ ಸಮ್ಮೇಳನವು ಸಂಸ್ಥೆಯ ಅಧ್ಯಕ್ಷರಾದ ಮತ್ತು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರೂ ಆದ ಆಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ರವರ ನೇತತ್ವದಲ್ಲಿ ನೆರವೇರಿಸಿ ಸಮಾವೇಶದ ಅಧ್ಯಕ್ಷತೆಯನ್ನು ರಜ್ವಿ ರವರು ನೆರವೇರಿಸಿದರು.
ಸುಮಾರು 15 ದಿನಗಳಿಂದ ಸಮ್ಮೇಳನದ ಪೂರ್ವಭಾವಿ ಸಿದ್ದತೆ ನಡೆಸಲಾಗಿದ್ದು ಸುಮಾರು ಆರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪುರುಷರು ಸೇರಿದಂತೆ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆಯೊಂದಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಸಲಾಗಿತ್ತು ಸದರಿ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಫ್ತಿ ಸಲ್ಮಾನ್ ಅಜ್ಹರಿ ಯವರಿಗೆ ಯುವಕರಿಂದ ವಿಜರಂಭಣೆಯಿಂದ ಅದ್ದೂರಿ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ಪ್ರಾರಂಭದಲ್ಲಿ ವೇದಿಕೆಯಲ್ಲಿ ಜಾಮಿಯಾ ಕಂಜೂಲ್ ಈಮಾನ್ ವಿದ್ಯಾರ್ಥಿಗಳಿಂದ ಸಾರೆ ಜಹಾನ್ ಸೆ ಅಚ್ಚ ದೇಶ ಭಕ್ತಿ ಗೀತೆಯನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು ನಂತರ ಮುಫ್ತಿ ಸಲ್ಮಾನ್ ರವರು ಭಾಷಣ ಮೂಲಕ ವಿಶೇಷವಾಗಿ ಯುವಕರಿಗೆ ಸಮಾಜದಲ್ಲಿ ಒಳ್ಳೆಯ ನಡತೆಯಿಂದ ಸೌಹಾರ್ದೆಯಿಂದ ಬಾಳಲು ಮುಖ್ಯವಾಗಿ ಇಸ್ಲಾಂ ಧರ್ಮೀಯರು ಸೇರಿದಂತೆ ಸರ್ವಧರ್ಮದವರಿಗೂ ಸಮಾಜ ಸೇವೆ ಸಲ್ಲಿಸಿ ದೇಶಕ್ಕೆ ಕೀರ್ತಿ ತರುವ ಜವಾಬ್ದಾರಿ ಪ್ರಮುಖವಾಗಿದೆ ಎಂದು ತಿಳಿಸಿದರು ಜಾಮಿಯಾ ಕಂಜೂಲ್ ಈಮಾನ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅರೇಬಿಕ್ ಶಿಕ್ಷಣದೊಂದಿಗೆ ನಗರದ ಪ್ರಸಿದ್ದ ಶಾಲೆ ಯುನೈಟೆಡ್ ಅಂತಾರಾಷ್ಟ್ರೀಯ ಪ್ರೌಢ ಶಾಲೆಯಲ್ಲಿ ಉಚಿತವಾಗಿ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಿರುವುದು ಸಂತಸ ವ್ಯಕ್ತಪಡಿಸಿದರು ಹಾಗು ಇದೆ ಮಾದರಿಯಾಗಿ ದೇಶದ ಇತರೆ ಮದರಸಗಳಲ್ಲೂ ಈ ರೀತಿಯ ಸೌಲಭ್ಯ ಕಲ್ಪಿಸಲು ಕರೆ ನೀಡಿದರು.
ಈ ಸಮ್ಮೇಳನದಲ್ಲಿ ಸುಮಾರು 50ಕ್ಕೂ ಹೆಚ್ಹು ಸುನ್ನಿ ವಿದ್ವಾಂಸರು ವೇದಿಕೆಯಲ್ಲಿ ಆಸೀನರಾಗಿದ್ದರು ನಂತರ ಎಲ್ಲಾ ವಿದ್ವಾಂಸರು ವಿಶ್ವ ಶಾಂತಿಗಾಗಿ ಪ್ರಾರ್ಥಿಸಲಾಯಿತು ಸಂಸ್ಥೆಯ ವತಿಯಿಂದ ಗುರುಗಳಿಗೆ ಘಾಜಿ ಎ ಇಸ್ಲಾಂ ಎಂಬ ಬಿರುದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ, ಸದಸ್ಯರಾದ ವಾಸೀಂ ಅಹಮದ್, ಔರಂಗ್ ಅತೀಕ್, ಫಾರೂಕ್ ಅಹಮದ್, ಅಖ್ತರ್ ಹುಸೈನ್, ಆರಿಫ್ ಅಲಿ, ಶಫಿ,ಖಾಲಿದ್, ಮುಖಂಡರಾದ ಯೂಸುಫ್ ಹಾಜಿ, ಜಂಶೀದ್ ಖಾನ್, ಮಸೀದಿಗಳ ಮುತವಲ್ಲಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯುವಕ ಸಂಘಗಳ ಪ್ರಮುಖರು, ಇನ್ನತರೆ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.







