ತಲಪಾಡಿ, ಫೆ.21: ನೀರಿಲ್ಲದೇ ಸಂಕಷ್ಟ ಅನುಭವಿಸುತ್ತಿರುವ ತಲಪಾಡಿ ಗ್ರಾಮಕ್ಕೆ ಕೂಡಲೇ ಕುಡಿಯುವ ನೀರು ಪೂರೈಕೆ ಆರಂಭಿಸುವಂತೆ ಒತ್ತಾಯಿಸಿ ತಲಪಾಡಿ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದು ಉಳ್ಳಾಲ ತಹಶೀಲ್ದಾರ್ ಮತ್ತು ತಲಪಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮದ ಕೆಲವೆಡೆಗೆ ಬಟ್ಟಪಾಡಿ ಪ್ರದೇಶದಿಂದ ನೀರಿನ ಪೈಪ್ ಲೈನ್ ಇದ್ದರೂ ನೀರು ಸರಬರಾಜು ಆಗುತ್ತಿಲ್ಲ. ಪೈಪ್ ಲೈನ್ ಇಲ್ಲದಿರುವ ಕೆಸಿ ರೋಡ್, ಪಳ್ಳ, ಪೂಮಣ್ಣು, ಕೆಸಿ ನಗರ, ಶಾಂತಿ ನಗರ ಮುಂತಾದ ಪ್ರದೇಶಗಳಲ್ಲಿ ನೀರಿನ ಅಭಾವ ಜೋರಾಗಿದ್ದು ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಿಲ್ಲ. ಆದ್ದರಿಂದ ಕೂಡಲೇ ಪೈಪ್ ಲೈನ್ ಇರುವ ಕಡೆ ಪೈಪ್ ಲೈನ್ ಮೂಲಕ ಹಾಗೂ ಪೈಪ್ ಲೈನ್ ಇಲ್ಲದ ಕಡೆ ಕೂಡಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಟಿ. ಎ. ಟಿ ಅಬ್ದುಲ್ ಖಾದರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಬಿಎಸ್ ಇಸ್ಮಾಯಿಲ್, ಉಳ್ಳಾಲ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಲಾಂ ಕೆಸಿ ರೋಡ್, ತಾಪಂ ಮಾಜಿ ಸದಸ್ಯರಾದ ಸುರೇಖಾ, ಸಿದ್ದಿಕ್ ಕೊಳಂಗರೆ, ಗ್ರಾಪಂ ಸದಸ್ಯ ವೈಭವ್ ಶೆಟ್ಟಿ, ವಿನು ಶೆಟ್ಟಿ, ಮಖ್ಯಾರ್ ಖಾದರ್, ಟಿ. ಎಂ ಇಬ್ರಾಹಿಂ, ಯಾಕೂಬ್ ಪಿಲಿಕೂರು, ಗೋಪಾಲ್ ತಲಪಾಡಿ, ಇಬ್ರಾಹಿಂ ಕೆಸಿ ರೋಡ್, ಸೋಷಿಯಲ್ ಫಾರೂಕ್, ಅಶ್ರಫ್ ಕೆಸಿ ನಗರ, ಸಲಾಂ ಪಿಲಿಕೂರು ಉಪಸ್ಥಿತರಿದ್ದರು.