janadhvani

Kannada Online News Paper

ಮುಕ್ಕ: ಪಾರ್ಸೆಲ್ ಡೆಲಿವರಿ ಕಚೇರಿಯಲ್ಲಿ ಕಳವು

ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮುಕ್ಕ ಚೆಕ್ ಪೋಸ್ಟ್ ಬಳಿ ಇರುವ ಪಾರ್ಸಲ್ ಡೆಲಿವರಿ ಅಂಗಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ನಗದು ಹಾಗೂ ಡೆಲಿವರಿಗೆ ಇಟ್ಟಿದ್ದ ಬೆಲೆಬಾಳುವ ಪಾರ್ಸೆಲ್ ಗಳನ್ನು ಕಳ್ಳತನ ಮಾಡಿದ್ದಾರೆ.

ಪಾರ್ಸಲ್ ಡೆಲಿವರಿ ಅಂಗಡಿಯ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಡ್ರಾವರ್ ಜಾಲಾಡಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ನಗದು ಹಾಗೂ ಗ್ರಾಹಕರಿಗೆ ಡೆಲಿವರಿ ಮಾಡಲು ಇಟ್ಟಿದ್ದ ಬೆಲೆಬಾಳುವ ಪಾರ್ಸೆಲ್ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.
ಯಾರೋ ಗೊತ್ತಿದ್ದವರೇ ಕೃತ್ಯ ನಡೆಸಿರಬೇಕು ಎಂದು ಶಂಕಿಸಲಾಗಿದೆ.

ಭಾನುವಾರ ರಾತ್ರಿ ವೇಳೆ ಸುಮಾರು ಎರಡು ಗಂಟೆ ಹೊತ್ತಿಗೆ ಈ ಕೃತ್ಯ ನಡೆದಿದ್ದು ಸೋಮವಾರ ಬೆಳಿಗ್ಗೆ ಡೆಲಿವರಿ ಅಂಗಡಿ ತೆರೆಯಲು ಬಂದು ನೋಡಿದಾಗ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.