ಉಪ್ಪಿನಂಗಡಿ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯ ಸಮಿತಿ ನಿರ್ದೇಶನದಂತೆ, ಜಾತಿ ಧರ್ಮ ಭೇದವಿಲ್ಲದೆ ಸರ್ವರಿಗೂ ಇಂದು ತಲೆನೋವಾಗಿ ಪರಿಣಮಿಸಿರುವ ಮಾದಕದ್ರವ್ಯ ವಿರೋಧಿ ಜನಜಾಗೃತಿ ಅಭಿಯಾನದ ಪ್ರಯುಕ್ತ, ಎಸ್.ಜೆ.ಎಂ ಕುಪ್ಪೆಟ್ಟಿ ರೇಂಜ್ ಆಶ್ರಯದಲ್ಲಿ, ಮದ್ರಸ ವಿದ್ಯಾರ್ಥಿಗಳಿಂದ SBS ಬಾಲ ಮಸೀರ (ವಿದ್ಯಾರ್ಥಿ ರ್ಯಾಲಿ) ಹಾಗೂ ಸಂದೇಶ ಭಾಷಣ ಕಾರ್ಯಕ್ರಮ ಕಲ್ಲೇರಿ ಜಂಕ್ಷನ್ ನಲ್ಲಿ ನಡೆಯಿತು.ಇದಕ್ಕೂ ಮೊದಲು ಕುಪ್ಪೆಟ್ಟಿ ಮದ್ರಸಾ ಸಭಾಂಗಣದಿಂದ ಆರಂಭಗೊಂಡು, ಕುಪ್ಪೆಟ್ಟಿ ಉಪ್ಪಿನಂಗಡಿ ಮುಖ್ಯ ರಸ್ತೆಯಾಗಿ ಕಲ್ಲೇರಿ ತನಕ ಸಾಗಿ, ಜಂಕ್ಷನ್ ನಲ್ಲಿ ಸಮಾಪ್ತಿಯಾಯಿತು.
ರೇಂಜ್ ಅಧ್ಯಕ್ಷರಾದ ಉಮರುಲ್ ಫಾರೂಕ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜ್ಯ ಸಮಿತಿ ಮಿಶನರಿ ವಿಭಾಗ ಕಾರ್ಯದರ್ಶಿ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್ ಸ್ವಾಗತಿ ಭಾಷಣ ಮಾಡಿದರು. ಸಭೆಯನ್ನು ಸುಲೈಮಾನ್ ಸಅದಿ ಉದ್ಘಾಟಿಸಿದರು. ಉಪ್ಪಿನಂಗಡಿ ಆರಕ್ಷಕ ಠಾಣೆ ಅಧಿಕಾರಿ ಪ್ರವೀಣ್ ಸರ್ ಶುಭ ಹಾರೈಸಿದರು. ಯುವ ವಾಗ್ಮಿ ಮುಹಮ್ಮದ್ ಅಮ್ಮಾರ್ ಮುಈನಿ ನೀರಕಟ್ಟೆ ಸಂದೇಶ ಭಾಷಣ ಮಾಡಿದರು.ವೇದಿಕೆಯಲ್ಲಿ ಉಸ್ಮಾನ್ ಹಾಜಿ, ಕಾಸಿಂ ನೆಕ್ಕಿಲು, ಮುಹಮ್ಮದ್ ಬಟ್ಲಡ್ಕ, ಯಾಕೂಬ್ ಕುದ್ರಡ್ಕ, ರಮ್ಲಾನ್ ಹಾಜಿ ನೆಕ್ಕಿಲು, ಕಾಸಿಂ ಪದ್ಮುಂಜ, ಇಸ್ಮಾಯಿಲ್ ಸಅದಿ, ಇಬ್ರಾಹಿಂ ಸಅದಿ, ಹಂಝ ಮದನಿ, ಹನೀಫ್ ಸಖಾಫಿ, ಪೋಲಿಸ್ ಅಧಿಕಾರಿಗಳಾದ ನವೀನ್ ಸರ್ ಮೊದಲಾದವರು ಉಪಸ್ಥಿತರಿದ್ದರು.
ರೇಂಜ್ ವ್ಯಾಪ್ತಿಯ ಮದ್ರಸಗಳ ಅಧ್ಯಾಪಕರು, ಸುನ್ನೀ ಸಂಘ ಕುಟುಂಬಗಳ ಸದಸ್ಯರು, ಹಿತೈಷಿಗಳು, ಸಾರ್ವಜನಿಕರು ಹಾಗೂ ನೂರಾರು ಎಸ್.ಬಿ.ಎಸ್ ಪುಟಾಣಿಗಳು ಭಾಗವಹಿಸಿದ್ದರು. ಶಫೀಕ್ ಅಹ್ಸನಿ ಧನ್ಯವಾದ ಹೇಳಿದರೆ, ಅಬ್ದುಲ್ ರಹೀಂ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.