janadhvani

Kannada Online News Paper

ಪಿ.ಎ ಕಾಲೇಜು ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೆಲ್ಯಾಡಿಯ ಕೆ.ಇ ಇರ್ಶಾದ್ ನೇಮಕ

ಮಂಗಳೂರು: ಮಂಗಳೂರಿನ ಹೆಸರಾಂತ ಕಾಲೇಜು ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಬಿಎ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರಾಗಿ ನೆಲ್ಯಾಡಿಯ ಕೆ.ಇ ಇರ್ಶಾದ್ ರವರು ನೇಮಕಗೊಂಡಿದ್ದಾರೆ.

ಈ ಮೊದಲು ಅಲ್ ಬದ್ರಿಯಾ ಸುನ್ನೀ ಮಹಿಳಾ ಶರೀಅತ್ ಹಾಗೂ ಪಿಯು ಕಾಲೇಜು ನೆಲ್ಯಾಡಿ ಇದರ ಮೆನೇಜರಾಗಿಯೂ ಎಸ್ಸೆಸ್ಸೆಫ್ ನೆಲ್ಯಾಡಿ ಸೆಕ್ಟರ್ ಪ್ರ,ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅಲ್ ಬದ್ರಿಯಾ ವಿದ್ಯಾಸಂಸ್ಥೆಯ ಪ್ರ,ಕಾರ್ಯದರ್ಶಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಮರ್ಹೂಂ ಕೆ.ಇ ಅಬ್ಬಾಸ್ ಹಾಗೂ ಆಯಿಶಾ ದಂಪತಿಗಳ ಪುತ್ರರಾಗಿದ್ದಾರೆ.