janadhvani

Kannada Online News Paper

ನಳಿನ್ ಪ್ರಣಾಳಿಕಾ ಜಿಹಾದ್, ಹಲ್ಲೆ: ನಾರಿ ರಕ್ಷಕ ಇಲಾಖೆ ತೆರೆಯಲಿ- ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ

ಬಿಜೆಪಿಯ ರಾಜ್ಯಾಧ್ಯಕ್ಷರು ಲವ್ ಜಿಹಾದ್ ಹಲ್ಲೆಗಳನ್ನು ಪ್ರಚೋದಿಸುವ ಪ್ರಯತ್ನ ಮಾಡುತ್ತಿದ್ದಾರೆ

ಮಂಗಳೂರು: ಇತ್ತೀಚೆಗೆ ನಳಿನ್ ಕುಮಾರ್ ಕಟೀಲ್ ರವರು ರಸ್ತೆ ಗುಂಡಿ, ಚರಂಡಿ, ಅಭಿವೃಧ್ದಿ, ನಿರುದ್ಯೋಗದ ಬಗ್ಗೆ ಜನರು ಪ್ರಶ್ನಿಸಬೇಡಿ, ಲವ್ ಜಿಹಾದ್ ಬಗ್ಗೆ ಗಮನ ಹರಿಸಿ ಎಂದು ಕರೆ ಕೊಟ್ಟಿದ್ದು, ಇದಕ್ಕೆ ಪೂರಕವಾಗಿ ಸುಬ್ರಮಣ್ಯದಲ್ಲಿ ಅಫೀದ್ ಎಂಬ ಯುವಕನಿಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಡುಗಿಯೊಂದಿಗೆ ಮಾತನಾಡಿರುವ ಕಾರಣಕ್ಕೆ ಹುಡುಗನಿಗೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಪೊಲೀಸರು ಸಂಘ ಪರಿವಾರದ ಹಲ್ಲೆ ಕೋರರ ಮತ್ತು ಹುಡುಗನ ವಿರುದ್ಧ ಪ್ರಕರಣ ದಾಖಲಿಸಿದ ಬಗ್ಗೆ ಮಾಹಿತಿ ಲಭಿಸಿದೆ.

ಅಂದು ಬೊಮ್ಮಾಯಿಯವರು ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿಕೆ ನೀಡಿದ್ದರಿಂದ ಇಂತಹಾ ಪ್ರಕರಣಗಳು ಮರುಕಳಿಸುತ್ತಿದೆ. ಕಾನೂನು ಕ್ರಮ ಸುದೃಢ ಗೊಳಿಸುವ ನಿರ್ಧಾರ ಕೈಗೊಂಡಿದ್ದರೆ ಇಂದು ದ.ಕ.ಜಿಲ್ಲೆಯಲ್ಲಿ ಪರಿಸ್ಥಿತಿ ಬೇರೆಯೇ ಇರುತ್ತಿತ್ತು.

ನಳಿನ್ ಕುಮಾರ್ ಕಟೀಲು ಬಿಜೆಪಿ ಯ ರಾಜ್ಯಾಧ್ಯಕ್ಷರು ಬೇರೆಯೇ ಹೇಳಿಕೆ ನೀಡಿ ಲವ್ ಜಿಹಾದ್ ಹಲ್ಲೆಗಳನ್ನು ಪ್ರಚೋದಿಸುವ ಪ್ರಯತ್ನ ಮಾಡಲಾಗಿದ್ದು, ಜನರನ್ನು ಪ್ರಕರಣಗಳಲ್ಲಿ ಸಿಲುಕಿಸಿ ಜೀವನ ಪರ್ಯಂತ ಪೊಲೀಸು ಠಾಣೆ , ಕೋರ್ಟ್, ಕಚೇರಿ ಅಲೆಯುವ ಭಾಗ್ಯವನ್ನು ಪ್ರಾಪ್ತಿಸಿದ್ದಾರೆ.

ಲವ್ ಜಿಹಾದ್ ಹಲ್ಲೆಗಳನ್ನು ಪ್ರಚೋದಿಸುವ ಬದಲು ಸರಕಾರ, ನಾರಿ ರಕ್ಷಕ ಪಡೆ ಎಂದು ಇಲಾಖೆ ತೆರೆದು ಪರವಾನಿಗೆ ಪ್ರದಾನಿಸಿದರೆ ಪೊಲೀಸು, ಕೋರ್ಟು ಕಚೇರಿ ಎಂದು ಜನರು ಜೀವನ ಹಾಳು ಮಾಡುವ ಕಾರ್ಯವಾದರೂ ತಪ್ಪುತ್ತದೆ.ಬಿ.ಜೆ.ಪಿ ಯ ರಾಜ್ಯಾಧ್ಯಕ್ಷರು ಅದನ್ನಾದರೂ ಮಾಡಲಿ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com