janadhvani

Kannada Online News Paper

ಸ್ಥಳೀಯ ಹಜ್ ಯಾತ್ರಿಕರ ಬುಕಿಂಗ್ ಆರಂಭ- ನಾಲ್ಕು ವಿಧ ಪ್ಯಾಕೇಜ್‌ಗಳ ಘೋಷಣೆ

12 ವರ್ಷಕ್ಕಿಂತ ಮೇಲ್ಪಟ್ಟ ಸೌದಿ ಪ್ರಜೆಗಳು ಮತ್ತು ವಲಸಿಗರು ಹಜ್ ಯಾತ್ರೆಗೆ ನೋಂದಾಯಿಸಿಕೊಳ್ಳಬಹುದು.

ಮಕ್ಕಾ: ಈ ವರ್ಷದ (ಹಿಜರಿ 1444- ಇಸವಿ 2023) ದೇಶೀಯ ಹಜ್ ಯಾತ್ರಿಕರ ನೋಂದಾವಣೆ (Booking Started) ಆರಂಭಗೊಂಡಿದ್ದು, ಹಜ್ ಪ್ಯಾಕೇಜ್‌ಗಳನ್ನು ಹಜ್ ಖಾತೆಯ ಸಚಿವಾಲಯ(Ministry of Hajj and Umrah) ಘೋಷಿಸಿದೆ.

ಈ ವರ್ಷ ಸ್ಥಳೀಯರ ಹಜ್ ಪ್ಯಾಕೇಜ್ ‌ಗೆ ಅತಿ ಕಡಿಮೆ ಎಂದರೆ 3,984 ರಿಯಾಲ್‌ಗಳು ಮತ್ತು ಗರಿಷ್ಟ 13,150 ಸೌದಿ ರಿಯಾಲ್‌ಗಳೆಂದು ದರ ನಿಗದಿಯಾಗಿದೆ. ಸಚಿವಾಲಯವು ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಪ್ರಕಟಿಸಿದೆ.

ಹಜ್ ಸೇವಾ ರಂಗದಲ್ಲಿರುವ ಕಂಪೆನಿಗಳ ವಿವರಗಳು ಹಜ್ಜಾಜ್‌ಗಳಿಗೆ ಲಭಿಸಲಿರುವ ವಿವಿಧ ಸೇವೆಗಳ ವಿವರಗಳು ಹಜ್ ಸಚಿವಾಲಯದ ಪೋರ್ಟಲ್ ಮೂಲಕ ಇಲ್ಲವೇ ನುಸುಕ್ ಮೊಬೈಲ್ ಆ್ಯಪ್ ಮೂಲಕ ಲಭಿಸಲಿದೆ.

12 ವರ್ಷಕ್ಕಿಂತ ಮೇಲ್ಪಟ್ಟ ಸೌದಿ ಪ್ರಜೆಗಳು ಮತ್ತು ವಲಸಿಗರು ಹಜ್ ಸಚಿವಾಲಯದ ಪೋರ್ಟಲ್ https://localhaj.haj.gov.sa ಮೂಲಕ ಇಲ್ಲವೇ ನುಸುಕ್ ಮೊಬೈಲ್ ಆ್ಯಪ್ ಮೂಲಕ ಹಜ್ ಯಾತ್ರೆಗೆ ನೋಂದಾಯಿಸಿಕೊಳ್ಳಬಹುದು.

ಸಚಿವಾಲಯ ಪ್ರಕಟಿಸಿದ ನಾಲ್ಕು ಪ್ಯಾಕೇಜ್‌ಗಳು

ಮೊದಲ ಪ್ಯಾಕೇಜ್ 10,596-11,841 ಸೌದಿ ರಿಯಾಲ್‌ಗಳ ಬೆಲೆಯಲ್ಲಿ ಮಿನಾ, ಅರಫಾತ್ ಮತ್ತು ಮುಝ್ದಲಿಫಾದಲ್ಲಿ ವಸತಿ ಮತ್ತು ಊಟೋಪಚಾರವನ್ನು ಒಳಗೊಂಡಿದೆ. (It includes housing and catering in Mina, Arafat, and Muzdalifah)

ಎರಡನೇ ಪ್ಯಾಕೇಜ್ 8,092-8,459 ಸೌದಿ ರಿಯಾಲ್‌ಗಳಿಂದ ಪ್ರಾರಂಭವಾಗುತ್ತದೆ, ಇದು ಮಿನಾ, ಅರಫಾತ್ ಮತ್ತು ಮುಝ್ದಲಿಫಾದಲ್ಲಿ ವಸತಿ ಮತ್ತು ಊಟೋಪಚಾರವನ್ನು ಒಳಗೊಂಡಿರುತ್ತದೆ.

ಮೂರನೇ ಪ್ಯಾಕೇಜ್ 13,150 ಸೌದಿ ರಿಯಾಲ್‌ಗಳಿಂದ ಪ್ರಾರಂಭವಾಗುತ್ತದೆ, ಇದು ಮಿನಾ, ಅರಫಾತ್ ಮತ್ತು ಮುಝ್ದಲಿಫಾದಲ್ಲಿ ವಸತಿ ಮತ್ತು ಊಟೋಪಚಾರವನ್ನು ಒಳಗೊಂಡಿದೆ.

ನಾಲ್ಕನೇ ಪ್ಯಾಕೇಜ್‌ಗೆ ಸಂಬಂಧಿಸಿದಂತೆ, ಇದು 3,984 ಸೌದಿ ರಿಯಾಲ್‌ಗಳಿಂದ ಪ್ರಾರಂಭವಾಗುತ್ತದೆ. ಮಕ್ಕಾ, ಅರಫಾತ್ ಮತ್ತು ಮುಝ್ದಲಿಫಾದಲ್ಲಿ ವಸತಿ ಮತ್ತು ಊಟವನ್ನು ಒಳಗೊಂಡಿದೆ.

ಮೇಲಿನ ಎಲ್ಲಾ ದರಗಳು ಮೌಲ್ಯವರ್ಧಿತ ತೆರಿಗೆಯನ್ನು ಒಳಗೊಂಡಿವೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಸೂಚಿಸಿದೆ.

error: Content is protected !! Not allowed copy content from janadhvani.com