janadhvani

Kannada Online News Paper

ಇಂದಿನಿಂದ ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನ- ಯಶಸ್ವಿಗೆ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ ಕರೆ

ಉಡುಪಿ, ಜ.01; ಸಾಮಾಜಿಕ, ಶೈಕ್ಷಣಿಕ ಪ್ರಗತಿಗಾಗಿ ಕಾರ್ಯಾಚರಿಸುತ್ತಿರುವ ಸುನ್ನೀ ವಿದ್ಯಾರ್ಥಿ ಒಕ್ಕೂಟ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಸದಸ್ಯತ್ವ ಅಭಿಯಾನ 2023 ಜನವರಿ 01 ರಿಂದ 10 ತನಕ ರಾಜ್ಯಾಧ್ಯಂತ ನಡೆಯಲಿದೆ.

ಎಸ್ಸೆಸ್ಸೆಫ್ ಕರ್ನಾಟಕದ ಮಣ್ಱಿನಲ್ಲಿ ಸುಮಾರು ನಾಲ್ಕು ದಶಕಗಳಿಂದ ಯಶಸ್ವಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಚುರುಕಿನ ಕಾರ್ಯಾಚರಣೆ ಮಾಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳನ್ನು ಈ ನಾಡಿಗೆ ಸಮರ್ಪಿಸಿದೆ.
ಈ ಕಲುಷಿಗೊಂಡಿರುವ ವಾತಾವರಣದಲ್ಲಿ ಹಾದಿ ತಪ್ಪುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಧಾರ್ಮಿಕತೆ, ನೈತಿಕತೆ ಹಾಗೂ ಆಧ್ಯಾತ್ಮಿಕತೆಯನ್ನು ತುಂಬಿ ಸಮಾಜದ ಸತ್ಪ್ರಜೆಗಳನ್ನಾಗಿ ಮಾಡುವಲ್ಲಿ ಎಸ್ಸೆಸ್ಸೆಫ್ ಯಶಸ್ವಾಯಾಗಿದೆ.

ರಾಷ್ಟ್ರದಾಧ್ಯಂತ ಕಾರ್ಯಾಚರಿಸುತ್ತಿರುವ ಈ ಬಲಿಷ್ಠ ಸಂಘಟನೆ ಇದೀಗ ಐದು ದಶಕಗಳು ಪೂರ್ತಿಗೊಳಿಸುತ್ತಾ ಸುವರ್ಣ ಮಹೋತ್ಸವ ಅಚರಣೆಯಲ್ಲಿದೆ.

ಕರ್ನಾಟಕ ಉಲಮಾ ಒಕ್ಕೂಟದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ವಿದ್ಯಾರ್ಥಿ ಒಕ್ಕೂಟವಾದ ಎಸ್ಸೆಸ್ಸೆಫ್, ಯುವಜನ ಒಕ್ಕೂಟವಾದ ಎಸ್.ವೈ.ಎಸ್. ಹಾಗೂ ಕರ್ನಾಟಕ ಮುಸ್ಲಿಮ್ ಜಮಾಅತ್ ಈ ಮೂರು ಸಂಘಟನೆಗಳು ಸಂಯುಕ್ತವಾಗಿ ಸದಸ್ಯತ್ವ ಅಭಿಯಾನವನ್ನು ನಡೆಸಲಿದೆ.

“ವ್ಯರ್ಥವಾಗದಿರಲಿ ಯೌವ್ವನ” ಎಂಬ ಧ್ಯೇಯ ವಾಕ್ಯದಡಿ ಎಸ್ಸೆಸ್ಸೆಫ್ 12 ವಯಸ್ಸಿನಿಂದ 32 ವಯಸ್ಸಿನವರೆಗೆ ಇರುವ ಸಂಘಟನೆಯ ತತ್ವ ಸಿದ್ಧಾಂತಗಳಲ್ಲಿ ಬದ್ಧರಾದ ವಿದ್ಯಾರ್ಥಿಗಳು, ಯುವಕರು ಸಂಘಟನೆಯ ಸದಸ್ಯತ್ವ ಅಭಿಯಾನದಲ್ಲಿ ಕೈಜೋಡಿಸಲಿದ್ದಾರೆ.

ಹನ್ನೆರಡು ವಯಸ್ಸಿನಿಂದ ಮೂವತ್ತೆರಡು ವಯಸ್ಸು ಪ್ರಾಯ ಮಿತಿಯಲ್ಲಿರುವ ಸುನ್ನೀ ಯುವಕರು ಈ ಅವಧಿಯಲ್ಲಿ ಸದಸ್ಯತ್ವ ಪಡೆದು ಮುಂದಿನ ದಿನಗಳಲ್ಲಿ ನಾಡಿಗೂ, ಕುಟುಂಬಕ್ಕೂ, ರಾಷ್ಟ್ರಕ್ಕೂ ಬೆನ್ನೆಲುಬಾಗಿ ನಿಲ್ಲುವ ಪ್ರಜೆಗಳಾಗಬೇಕಾದ್ದು ಎಸ್ಸೆಸ್ಸೆಫ್ ಧ್ಯೇಯವಾಗಿದೆ.

ಈ ಸದಸ್ಯತ್ವ ಅಭಿಯಾನದ ಭಾಗವಾಗಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲೆಯ ಐದು ಪ್ರಮುಖ ಕೇಂದ್ರಗಳಲ್ಲಿ ಈಗಾಗಲೇ ಸದಸ್ಯತ್ವ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆಗೊಂಡಿದ್ದು, 2023 ಜನವರಿ 01 ಇವತ್ತಿನಿಂದ ನಡೆಯುವ ಸಂಘಟನಾ ಸದಸ್ಯತ್ವ ಅಭಿಯಾನದಲ್ಲಿ ಕಾರ್ಯಕರ್ತರು, ನಾಯಕರು ಚುರುಕಿನೊಂದಿಗೆ ಕಾರ್ಯಾಚರಿಸಿ ಅಭಿಯಾನ ಅತ್ಯಂತ ಯಶಸ್ವಿಗೊಳಿಸಬೇಕಾಗಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಎಂ.ಎಚ್. ಅಹ್ಮದ್ ಶಬೀರ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಎಂ.ಕೆ. ಇಬ್ರಾಹಿಂ ಮಜೂರು, ಫಿನಾನ್ಸ್ ಸೆಕ್ರೆಟರಿ ಅಲ್ತಾಫ್ ಕಾರ್ಕಳ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಮಾಧ್ಯಮ ಕಾರ್ಯದರ್ಶಿ
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ