janadhvani

Kannada Online News Paper

ಮುಹಮ್ಮದ್ ಕೋಟ ಖತ್ತರ್ ನಲ್ಲಿ ನಿಧನ – ಕೆ.ಸಿ.ಎಫ್ ಸಹಕಾರದೊಂದಿಗೆ ಅಂತ್ಯಕ್ರಿಯೆ

ಕಳೆದ ಕೆಲವು ದಿನಗಳ ಹಿಂದೆ ಖತ್ತರ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಕೋಟ ನಿವಾಸಿ, ಕೆಸಿಎಫ್ ಸನಯ್ಯಾ ಯುನಿಟ್ ಅಧ್ಯಕ್ಷರಾದ *ಮುಹಮ್ಮದ್ ಕೋಟ* ರವರು ದಿನಾಂಕ 29-12-2022 ರಂದು ಚಿಕಿತ್ಸೆ ಪಲಕಾರಿಯಾಗದೆ ಮರಣಹೊಂದಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೆಲ್ಲಾ, ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತ್ತರ್ ನ ನಾಯಕರು ನಿರಂತರ ಸಂಪರ್ಕದಲ್ಲಿದ್ದುಕೊಂಡು, ಮರಣ ಹೊಂದಿದ ವೇಳೆ ಅಂತಿಮ ಸಂಸ್ಕಾರ ಕಾರ್ಯ ಹಾಗೂ ಇನ್ನಿತರ ಕಾರ್ಯದಲ್ಲಿ ಕೆಸಿಎಫ್ ಸಹಕಾರಿಯಾಗಿತ್ತು. ಮುಹಮ್ಮದ್ ಕೋಟ ರವರ ಅಂತ್ಯಸಂಸ್ಕಾರ ಹಾಗೂ ಮಯ್ಯತ್ತ್ ನಮಾಝ್ ಕೆಸಿಎಫ್ ನಾಯಕರ ಹಾಗೂ ಕಾರ್ಯಕರ್ತರ ಉಪಸ್ಥಿತಿಯೊಂದಿಗೆ ಖತ್ತರ್’ನ ಅಬುಹಮುರ್ ದಫನ ಸ್ಥಳದಲ್ಲಿ ನಡೆಯಿತು.