ಮಹಿಳೆಯರ ಆನ್‌ಲೈನ್ ಇಸ್ಲಾಮೀ ಶಿಕ್ಷಣ ರಂಗದಲ್ಲಿ ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ‘ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್’ನ ಹೊಸ ಡಾಕ್ಯುಮೆಂಟರಿಯ ಪ್ರಕಾಶನ ಕಾರ್ಯಕ್ರಮವು ಇಂದು ರಾತ್ರಿ (ನವೆಂಬರ್ 19 ಶನಿವಾರ) ಎಂಟು ಗಂಟಗೆ ಜುಬೈಲ್ ಕೆಸಿಎಫ್ ಹಾಲ್‌ನಲ್ಲಿ ನಡೆಯುವ ಮರ್ಕಝುಲ್ ಹುದಾ ಸಮಾವೇಶದಲ್ಲಿ ಬಿಡುಗಡೆಯಾಗಲಿದೆ.
ಮಹಿಳೆಯರ ಅಚ್ಚುಮೆಚ್ಚಿನ ‘ಖಮರಿಯಾ’ ಶರೀಅತ್ ಕೋರ್ಸ್, ಖುರ್‌ಆನ್ ಪಾರಾಯಣ ತರಬೇತಿಗಾಗಿ ‘ಅಲ್ ಮುಜವ್ವಿದಾ’ ಹಾಗೂ ಇನ್ನಿತರ ಹಲವಾರು ತರಬೇತಿ ಕೋರ್ಸುಗಳನ್ನು ನಡೆಸುತ್ತಿರುವ ವಿಮೆನ್ಸ್ ಕೌನ್ಸಿಲ್, ಮಹಿಳಾ ಶರೀಅತ್ ಕಾಲೇಜುಗಳು ಪಠ್ಯ ಪುಸ್ತಕ ರಚನೆ ಮತ್ತು ಶಿಕ್ಷಕಿಯರ ತರಬೇತಿ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ.
ಇದರ ನೂತನ ಡಾಕ್ಯುಮೆಂಟರಿಯನ್ನು ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಫಾರೂಖ್ ಕನ್ಯಾನ ಬಿಡುಗಡೆ ಮಾಡಲಿದ್ದಾರೆ.
ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್,ಕೆಸಿಎಫ್ ಅಂತಾರಾಷ್ಟ್ರೀಯ ನಾಯಕ ಹಾಜಿ ಅಬೂಬಕರ್ ರೈಸ್ಕೋ, ಮರ್ಕಝುಲ್ ಹುದಾ ರಾಷ್ಟ್ರೀಯ ಸಮಿತಿಯ ಮುಖಂಡರಾದ ಶಾಹುಲ್ ಹಮೀದ್ ಉಜಿರೆ, ಖಮರುದ್ದೀನ್ ಗೂಡಿನಬಳಿ, ಆಸಿಫ್ ಗೂಡಿನಬಳಿ, ನೌಶಾದ್ ಪೋಲ್ಯ, ಬಶೀರ್ ಇಂದ್ರಾಜೆ,ರಾಷ್ಟ್ರೀಯ ಸಮಿತಿ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಕೆಸಿಎಫ್ ಜುಬೈಲ್ ಝೋನ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ, ಮುಂತಾದವರು ಭಾಗವಹಿಸಲಿದ್ದಾರೆಂದು ‘ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಉಮರ್ ಸಖಾಫಿ ಎಡಪ್ಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.