ಸಮಾಜ ಸೇವೆ ಹಾಗೂ ಸಂಘಟನಾ ರಂಗದಲ್ಲಿ ಕಾರ್ಯ ನಿರ್ವಹಿಸುವಾಗ ಟೀಕೆ ಟಿಪ್ಪಣಿಗಳು ಸಾಮಾನ್ಯವಾಗಿದ್ದು ಅವುಗಳಿಗೆ ಕಿವಿಗೊಡದೆ ನೇರವಾಗಿ ಮುನ್ನಡೆದರೆ ಯಶಸ್ಸು ಖಂಡಿತ ಎಂದು ಗೌರವಾನ್ವಿತ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಆಧ್ಯಕ್ಷರಾದ ಮೌಲಾನ ಶಾಫಿ ಸಅದಿ ಉಸ್ತಾದರು ಕಿವಿ ಮಾತುಗಳನ್ನಾಡಿದರು.

ಸೌದಿ ಅರೇಬಿಯಾ ಪರ್ಯಟನೆಯಲ್ಲಿರುವ ಅವರು ಅಕ್ಟೋಬರ್ 29 ಶನಿವಾರ ಬೆಳಿಗ್ಗೆ ಕೆ.ಸಿ.ಎಪ್ ಅಲ್ ಖಸೀಂ ಝೋನ್ ಆಯೋಜಿಸಿದ ಸನ್ಮಾನ ಸಮಾರಂಭದಲ್ಲಿ ಕೆ.ಸಿ.ಎಫ್ ಕಾರ್ಯಕರ್ತರನ್ನು ಹುರಿದುಂಬಿಸಿ ಮಾತನಾಡಿದರು
ಇದೇ ವೇಳೆ ಅವರು ಸಅದಿಯ ಎಜುಕೇಶನಲ್ ಫೌಂಡೇಶನ್ ಬೆಂಗಳೂರು ಇದರ ಖಸೀಂ ಪ್ರಾಂತ್ಯದ ಸಮಿತಿಯನ್ನು ಪುನರ್ರಚಿಸಿದರು.
ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ,ಯಾಕೂಬ್ ಸಖಾಫಿ ,ಝೋನ್ ಕಾರ್ಯದರ್ಶಿ ಬಶೀರ್ ಕನ್ಯಾನ, ಇರ್ಷಾದ್ ಸಚ್ಚೇರಿ ಪೇಟೆ, ರಝಾಕ್ ನೆಕ್ಕಿಲ್ ಹಿರಿಯರಾದ ತಾಜುದ್ದೀನ್ ಕೆಮ್ಮಾರ, ರಝಾಕ್ ಅಡ್ಡೂರು, ಮುಸ್ತಫಾ ಲತೀಫಿ , ಸಲೀಂ ಬೈತಾರ್ ಮೊದಲಾದವರು ಬಾಗವಹಿಸಿದರು.







