ದುಬೈ : “ಪ್ರವಾದಿ ﷺ ಮಾನವೀಯತೆಯ ಮಹಾ ನಾಯಕ” ಎಂಬ ಘೋಷವಾಕ್ಯದಡಿಯಲ್ಲಿ ಯುಎಇಯಾದ್ಯಂತ ಕೆಸಿಎಫ್ ನಡೆಸುತ್ತಿರುವ ಮೀಲಾದ್ ಕ್ಯಾಂಪೈನ್ ಪ್ರಯುಕ್ತ ಕೆಸಿಎಫ್ ದುಬೈ ನೋರ್ತ್ ಝೋನ್ ಅಧೀನದಲ್ಲಿ ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ದೇರಾ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣ ಮರ್ಹೂಂ ಅಬ್ದುರ್ರಹ್ಮಾನ್ ‘ಅಂದು’ ವೇದಿಕೆಯಲ್ಲಿ ಇತ್ತೀಚಿಗೆ ನಡೆಯಿತು.
ದ.ಕ ಜಿಲ್ಲಾ ಸಂಯುಕ್ತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಕೆಸಿಎಫ್ ಅಂತಾರಾಷ್ಟ್ರೀಯ ಸಂಘಟನಾ ವಿಭಾಗದ ಚೈರ್ ಮ್ಯಾನ್ ಅಬ್ದುಲ್ ಜಲೀಲ್ ನಿಝಾಮಿ ಉದ್ಘಾಟಿಸಿದರು.ಮೀಲಾದ್ ಸ್ವಾಗತ ಸಮೀತಿ ಚೈರ್ ಮ್ಯಾನ್ ಅಶ್ರಫ್ ಹಾಜಿ ಅಡ್ಯಾರ್ ಅಧ್ಯಕ್ಷತೆ ವಹಿಸಿದ್ದರು. ಅನಸ್ ಸಿದ್ದೀಕಿ ಕಾಮಿಲ್ ಸಖಾಫಿ ಶಿರಿಯ ಮದ್ಹುರ್ರಸೂಲ್ ಪ್ರಭಾಷಣ ನಡೆಸಿದರು.
ಸಯ್ಯಿದ್ ಅಬ್ದುರ್ರಹ್ಮಾನ್ ಮಸೂದ್ ತಂಙಳ್,
ಕೆಸಿಎಫ್ ಅಂತಾರಾಷ್ಟ್ರೀಯ ಇಹ್ಸಾನ್ ವಿಭಾಗದ ಚೈರ್ ಮ್ಯಾನ್ ಇಕ್ಬಾಲ್ ಕಾಜೂರ್, ಪಬ್ಲಿಕೇಷನ್ ವಿಭಾಗದ ಚೈರ್ ಮ್ಯಾನ್ ಕರೀಂ ಮುಸ್ಲಿಯಾರ್ ಶಾರ್ಜಾ,ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಮೂಸ ಬಸರ, ಸ್ವಾಗತ ಸಮೀತಿ ವರ್ಕಿಂಗ್ ಚೈರ್ ಮ್ಯಾನ್ ಅಬ್ದುಲ್ ನಝೀರ್ ಹಾಜಿ, ಸ್ವಾಗತ ಸಮಿತಿ ಕೋಶಾಧಿಕಾರಿ ಹಮೀದ್ ಬಸರ, ನೋರ್ತ್ ಝೋನ್ ಅಧ್ಯಕ್ಷರು ಇಸ್ಮಾಯಿಲ್ ಹಾಜಿ ಮದನಿ ನಗರ, ಅಬ್ದುಲ್ ಲತೀಫ್ ಸನ್ಮಾರ್ಕೊ, ನೋರ್ತ್ ಝೋನಿನ ಕಾರ್ಯದರ್ಶಿ ನಿಯಾಝ್ ಬಸರ, ಇಹ್ಸಾನ್ ವಿಭಾಗದ ಅಧ್ಯಕ್ಷರಾದ ಇಬ್ರಾಹಿಂ ಮದನಿ, ರಾಷ್ಟ್ರೀಯ ಸಮಿತಿಯ ನಾಯಕರು ಹಾಗೂ ಝೋನ್ ನಾಯಕರು ಮುಂತಾದವರು ಉಪಸ್ಥಿತರಿದ್ದರು.
ಕೆಸಿಎಫ್ ನೋರ್ತ್ ಝೋನ್ ಆಡಳಿತ ವಿಭಾಗ ಚೈರ್ ಮ್ಯಾನ್ ರಿಯಾಜ್ ಕೊಂಡಂಗೇರಿ ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿ ಮುಸ್ತಫಾ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.