ಕೋಝಿಕ್ಕೋಡ್, ಅ. 14|ಇಂಡಿಯನ್ ಗ್ರ್ಯಾಂಡ್ ಮುಫ್ತಿ (Indian Grand Mufthi) ಕಾಂತಪುರಂ ಎ.ಪಿ.ಉಸ್ತಾದರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಪುತ್ರ ಡಾ|ಅಬ್ದುಲ್ ಹಕೀಂ ಅಝ್ಹರಿ ತಿಳಿಸಿದ್ದಾರೆ.
ಪ್ರತಿ ದಿನ ಲಭಿಸುತ್ತಿರುವ ಮಾಹಿತಿಯು ಆಶಾದಾಯಕವಾಗಿದೆ.ಉಸ್ತಾದರೊಂದಿಗೆ ಮಾತನಾಡುತ್ತಿದ್ದು,ರಕ್ತದೊತ್ತಡದಿಂದ ಉಂಟಾದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹಕೀಂ ಅಝ್ಹರಿ ಹೇಳಿದರು.
ಖಾಸಗಿ ಆಸ್ಪತ್ರೆಯಲ್ಲಿರುವ ಉಸ್ತಾದ್ ಅವರಿಗೆ ತಜ್ಞ ವೈದ್ಯರ ಸೇವೆ ಒದಗಿಸಲಾಗಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿರುವ ವೈದ್ಯರನ್ನು ಟೆಲಿಕಾನ್ಫರೆನ್ಸ್(Teleconference) ಮೂಲಕವೂ ಸಂಪರ್ಕಿಸಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಉಸ್ತಾದರು ಆಸ್ಪತ್ರೆಯಿಂದ ನಿರ್ಗಮಿಸುವ ನಿರೀಕ್ಷೆ ಇದೆ. ಉಸ್ತಾದರ ಆರೋಗ್ಯಕ್ಕಾಗಿ ಪ್ರಪಂಚದಾದ್ಯಂತ ಪ್ರಾರ್ಥನೆಗಳು ನಡೆಯುತ್ತಿದೆ ಎಂಬುದು ಅತ್ಯಂತ ಸಮಾಧಾನಕರ ಸಂಗತಿಯಾಗಿದೆ ಎಂದು ಹಕೀಮ್ ಅಝ್ಹರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.