janadhvani

Kannada Online News Paper

ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವಾರ್ಷಿಕ ಕೌನ್ಸಿಲ್

ಪುತ್ತೂರು : ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ.) ಎಸ್‌ವೈಎಸ್ ದ.ಕ. ಜಿಲ್ಲೆ ಈಸ್ಟ್ ಇದರ ವಾರ್ಷಿಕ ಕೌನ್ಸಿಲ್ ದಿನಾಂಕ 27.09.2022 ರಂದು ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸ‌ಅದಿ ಮಜೂರುರವರ ಅಧ್ಯಕ್ಷತೆಯಲ್ಲಿ ಪುತ್ತೂರು ಪಡೀಲ್ ಎಂಡಿಎಸ್ ಸಭಾಂಗಣದಲ್ಲಿ ನಡೆಯಿತು.

ರಾಜ್ಯ ಎಸ್‌ವೈಎಸ್ ನಾಯಕರಾದ ಸಯ್ಯಿದ್ ಇಸ್ಮಾಯಿಲ್ ತಂಙಲ್ ಉಜಿರೆರವರು ದುಆ ನೆರೆವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಎಸ್‌ವೈಎಸ್ ರಾಜ್ಯ ಪ್ರಭಾರ ಅಧ್ಯಕ್ಷರೂ, ಸಂಘಟನಾ ಕಾರ್ಯದರ್ಶಿ ಜಿ.ಎಂ. ಕಾಮಿಲ್ ಸಖಾಫಿ ಉಸ್ತಾದರು ಸಭೆಯನ್ನು ಉದ್ಘಾಟಿಸಿದರು. ಎಸ್‌ವೈಎಸ್ ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ ಪ್ರಾಸ್ತಾವಿಕ ಮಾತನ್ನಾಡಿದರು.

ಎಸ್‌ವೈಎಸ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಮಲೆಬೆಟ್ಟು ವಾರ್ಷಿಕ ವರದಿ ಮಂಡಿಸಿದರು. ಜಿಲ್ಲಾ ಕೋಶಾಧಿಕಾರಿ ಜಿ. ಮುಹಮ್ಮದ್ ಕುಂಞಿ ಜೋಗಿಬೆಟ್ಟುರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ದ‌ಅ್‌ವಾ ವಿಭಾಗದ ವರದಿಯನ್ನು ಜಿಲ್ಲಾ ದ‌ಅ್‌ವಾ ಕಾರ್ಯದರ್ಶಿ ಅಬ್ದುಲ್‌ ಅಝೀಝ್ ಮಿಸ್ಬಾಹಿ, ಸಂಘಟನಾ ವಿಭಾಗದ ವರದಿಯನ್ನು ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಸಾಂಸ್ಕೃತಿಕ ವಿಭಾಗದ ವರದಿಯನ್ನು ಸಾಂಸ್ಕೃತಿಕ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ, ಸಾಂತ್ವನ ವಿಭಾಗದ ವರದಿಯನ್ನು ಜಿಲ್ಲಾ ಸಾಂತ್ವನ ಕಾರ್ಯದರ್ಶಿ ಸ್ವಾಲಿಹ್ ಮುರ, ಮಾಧ್ಯಮ ವಿಭಾಗದ ವರದಿಯನ್ನು ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು ಪ್ರತ್ಯೇಕವಾಗಿ ಮಂಡಿಸಿದರು.ಸಭೆಯ ವೀಕ್ಷಕರಾಗಿ ಆಗಮಿಸಿದ ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸ‌ಅದಿ ಕೊಡಗುರವರು ಕೌನ್ಸಿಲ್ ನ ನೇತೃತ್ವ ವಹಿಸಿ ಮಾತನಾಡಿ, ಜಿಲ್ಲಾ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದರು. ಎಸ್‌ವೈಎಸ್ ದ.ಕ. ಈಸ್ಟ್ ಜಿಲ್ಲಾ ಉಸ್ತುವಾರಿ ವಿ. ಪಿ. ಮೊಯ್ದಿನ್ ಪೊನ್ನತ್ ಮೊಟ್ಟೆ ಎಸ್‌ವೈಎಸ್ 30 ಬಗ್ಗೆ ವಿಷಯ ಮಂಡಿಸಿದರು.

ಎಸ್‌ವೈಎಸ್ ಮೀಡಿಯಾ ಡೈರಿ ಬಿಡುಗಡೆ: ಎಸ್‌ವೈಎಸ್ ಈಸ್ಟ್ ಜಿಲ್ಲಾ ಮಿಡಿಯಾ ವಿಭಾಗವು ಕಳೆದ ಹತ್ತು ತಿಂಗಳಲ್ಲಿ ಜಿಲ್ಲೆ, ಸೆಂಟರ್ ಹಾಗೂ ಬ್ರಾಂಚುಗಳಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳ ಫೋಟೋಗಳನ್ನೊಳಗೊಂಡ ಎಂಟು ಪುಟಗಳ ವರ್ಣರಂಜಿತ ಡೈರಿಯನ್ನು ರಾಜ್ಯ ನಾಯಕರು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಇದರ ಅಧ್ಯಕ್ಷರಾದ ಖಾಸಿಂ ಹಾಜಿ ಪರ್ಲೋಟುರವರಿಗೆ ನೀಡುವುದರ ಮೂಲಕ ಬಿಡುಗಡೆ ಗೊಳಿಸಲಾಯಿತು.

ಮೀಲಾದ್ ಕ್ಯಾಂಪೇನ್ ಪೋಸ್ಟರ್ ಬಿಡುಗಡೆ: ಇದೇ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ರವರ ಜನ್ಮದಿನದಿಂದ ಪುಳಕಿತಗೊಂಡು ಪುಣ್ಯ ರಬೀವುಲ್ ಅವ್ವಲ್ ತಿಂಗಳಲ್ಲಿ ರಾಜ್ಯ ಸಮಿತಿಯು ಹೊರಡಿಸಿದ ‘ಭೀತಿಯ ಜಗತ್ತಿಗೆ ಪ್ರೀತಿಯ ಪ್ರವಾದಿ (ಸ.ಅ.)’ ಎಂಬ ಧ್ಯೇಯ ವಾಕ್ಯದಿಂದ ಕೂಡಿದ ರಾಜ್ಯ ಮಟ್ಟದ ಮೀಲಾದ್ ಕ್ಯಾಂಪೇನ್ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಸಯ್ಯಿದ್ ಸಾದಾತ್ ತಂಙಲ್ ಕರ್ವೇಲ್, ಸಯ್ಯಿದ್ ಅಬ್ದುಸ್ಸಲಾಂ ತಂಙಲ್, ರಾಜ್ಯ ನಾಯಕರಾದ ಖಾಸಿಂ ಪದ್ಮುಂಜ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಇಕ್ಬಾಲ್ ಬಪ್ಪಳಿಗೆ, ಎಂ. ಎಚ್. ಅಬ್ದುಲ್ ಖಾದರ್ ಹಾಜಿ, ಸ್ಥಳೀಯ ಎಸ್‌ವೈಎಸ್ ಬ್ರಾಂಚ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಬನ್ನೂರು ಹಾಗೂ ಎಸ್‌ವೈಎಸ್ ಈಸ್ಟ್ ಜಿಲ್ಲಾ ಸಾಮಾಜಿಕ ಕಾರ್ಯದರ್ಶಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್ ಉಪಸ್ಥಿತರಿದ್ದರು. ಜಿಲ್ಲಾ ವ್ಯಾಪ್ತಿಯ 20 ಸೆಂಟರುಗಳಿಂದ ಜಿಲ್ಲಾ ಪ್ರತಿನಿಧಿಗಳು ಭಾಗವಹಿಸಿದರು. ಸ್ವಯಂ ಸೇವಕರಾಗಿ ಎಸ್‌ವೈಎಸ್ ಪುತ್ತೂರು ಸೆಂಟರ್ ಟೀಂ ಇಸಾಬಾ ಸದಸ್ಯರು ಕಾರ್ಯ ನಿರ್ವಹಿಸಿದರು.

ಕೊನೆಯಲ್ಲಿ ಸಂಘ ಕುಟುಂಬದಲ್ಲಿ ಅಗಲಿದವರಿಗಾಗಿ ತಹ್ಲೀಲ್ ಹೇಳಿ ಪ್ರಾರ್ಥಿಸಲಾಯಿತು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು ಸ್ವಾಗತಿಸಿದರು. ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಧನ್ಯವಾದಗೈದರು.

ವರದಿ : ಯೂಸುಫ್ ಸಯೀದ್ ಪುತ್ತೂರು