janadhvani

Kannada Online News Paper

ಎಸ್ ಎಸ್ ಎಫ್ ಬೆಳಂದೂರು ಶಾಖೆ ವತಿಯಿಂದ ಧ್ವಜ ದಿನಾಚರಣೆ

ಪುತ್ತೂರು: ಎಸ್ ಎಸ್ ಎಫ್ ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು 34ರ ಸಂಭ್ರಮದ ಅಂಗವಾಗಿ ಎಸ್ ಎಸ್ ಎಫ್ ಬೆಳಂದೂರು ಶಾಖೆ ವತಿಯಿಂದ ಧ್ವಜ ದಿನಾಚರಣೆ ಕಾರ್ಯಕ್ರಮ ಪಳ್ಳತ್ತಾರಿನಲ್ಲಿ ಸೆ.19ರಂದು ನಡೆಯಿತು.

ಎಸ್ಸೆಸೆಫ್ ದ. ಕ. ಈಸ್ಟ್ ಜಿಲ್ಲಾ ಸದಸ್ಯ ಕಲಾಂ ಝುಹ್‌ರಿ ಉಸ್ತಾದ್ ರವರು ದುಅ ಹಾಗೂ ಸಂದೇಶ ಭಾಷಣ ಮಾಡಿದರು. ಎಸ್ ಎಸ್ ಎಫ್ ಬೆಳಂದೂರು ಶಾಖೆಯ ಅದ್ಯಕ್ಷ ಸಯ್ಯಿದ್ ಮುಹಮ್ಮದ್ ಶಮ್ಮಾಸ್ ತಂಙಳ್ ಹಾಗೂ ಎಸ್ ವೈ ಎಸ್ ನ ಅದ್ಯಕ್ಷ ಉಮರ್ ಕೂಂಕ್ಯ ಹಾಗೂ ಎಸ್ ವೈ ಎಸ್, ಎಸ್ ಎಸ್ ಎಫ್ ನ ಕಾರ್ಯಕರ್ತರು ಭಾಗವಹಿಸಿದರು.