janadhvani

Kannada Online News Paper

ಅನಧಿಕೃತ ಟೋಲ್ ಗೇಟ್ ತೆರವಿಗಾಗಿ ಶ್ರಮಿಸಿದ ಯು.ಟಿ. ಖಾದರ್ ರವರಿಗೆ ಧನ್ಯವಾದಗಳು- ಕೆ.ಅಶ್ರಫ್

ಶ್ರೀ ಯು.ಟಿ. ಕಾದರ್ ರವರು ಅಧಿವೇಶನ ಶೂನ್ಯ ವೇಳೆಯಲ್ಲಿ ಸರಕಾರದ ಸ್ಪಷ್ಟ ಉತ್ತರ ಬಯಸಿ ಧ್ವನಿ ಎತ್ತಿದ್ದರು

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 (NH-66) ಸುರತ್ಕಲ್ ನಲ್ಲಿರುವ ಅವೈಜ್ಞಾನಿಕ, ಅನಧಿಕೃತ ಟೋಲ್ ಅನ್ನು ತೆರವು ಗೊಳಿಸುವಂತೆ ಕರ್ನಾಟಕದ ಸರಕಾರದ ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಯು.ಟಿ. ಕಾದರ್ (U.T.Khader) ರವರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದು, ಇದೀಗ ಸರಕಾರ ಅಧಿಕೃತವಾಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ರದ್ದತಿ ಬಗ್ಗೆ ನಿರ್ಣಯ ಕೈಗೊಂಡಿರುವುದನ್ನು ಬಹಿರಂಗ ಪಡಿಸಿದೆ.

ಈ ನಿಟ್ಟಿನಲ್ಲಿ, ಸಾರ್ವಜನಿಕರ ಬಹು ಕಾಲದ ಅಪೇಕ್ಷೆಗೆ ಸ್ಪಂದಿಸಿ, ಶ್ರೀ ಯು.ಟಿ.ಖಾದರ್ ಅವರು ಸರಕಾರದ ಸ್ಪಷ್ಟ ನಿಲುವು ಬಯಸಿ ಧ್ವನಿ ಎತ್ತಿರುವುದಕ್ಕೆ ಅವರಿಗೆ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಮಾಜಿ ಮೇಯರ್, ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಧೀಕೃತ ಟೋಲ್ ತೆರವುಗೊಳಿಸುವ ಬೇಡಿಕೆಯೊಂದಿಗೆ ಹಲವಾರು ವರ್ಷದಿಂದ ವಿವಿಧ ಸಂಘಟನೆಗಳು, ಜನ ಪ್ರತಿನಿಧಿಗಳು ಹೋರಾಟ ನಡೆಸಿ ಕೊಂಡು ಬಂದಿದ್ದು, ಹಿಂದಿನ ವರ್ಷ ಟೋಲ್ ವಿರುದ್ಧ ಜನಾಕ್ರೋಶ ಸೃಷ್ಟಿಯಾಗಿ ತೀವ್ರ ಪ್ರತಿಭಟನೆ ನಡೆಸಲಾಗಿತ್ತು. ಈ ಮಧ್ಯೆ ಸರಕಾರ ಹೋರಾಟಗಾರರಿಗೆ ಟೋಲ್ ರದ್ದು ಪಡಿಸುವ ಬಗ್ಗೆ ಭರವಸೆ ನೀಡಿತ್ತು. ಆದರೆ ಹೆದ್ದಾರಿ ಪ್ರಾಧಿಕಾರ ಮತ್ತು ಖಾಸಗಿ ಗುತ್ತಿಗೆ ಕಂಪೆನಿಗಳು ಟೋಲ್ ರದ್ದು ಪಡಿಸಲು ನಿರಾಕರಣೆ ಸೂಚಿಸಿತ್ತು. ಕಳೆದ ಹಲವು ತಿಂಗಳಿಂದ ಟೋಲ್ ರದ್ದತಿಗಾಗಿ ಸಂಘಟನೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಟೋಲ್ ರದ್ದತಿಗಾಗಿ ಬೇಡಿಕೆ ಮುಂದಿರಿಸಿ, ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.

ಟೋಲ್ ರದ್ದತಿ ವಿಷಯದಲ್ಲಿ ಸಾರ್ವಜನಿಕರ ಅಪೇಕ್ಷೆ ಮೇರೆಗೆ ಕರ್ನಾಟಕದ ಸರಕಾರದ ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಯು.ಟಿ. ಕಾದರ್ ರವರು ಅಧಿವೇಶನ ಶೂನ್ಯ ವೇಳೆಯಲ್ಲಿ ಸರಕಾರದ ಸ್ಪಷ್ಟ ಉತ್ತರ ಬಯಸಿ ಧ್ವನಿ ಎತ್ತಿದ್ದರು. ಇದೀಗ ಸರಕಾರ ಅಧಿಕೃತವಾಗಿ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ರದ್ದತಿ ಬಗ್ಗೆ ನಿರ್ಣಯಿಸಿದ ಬಗ್ಗೆ ಮಾಹಿತಿ ಬಹಿರಂಗ ಗೊಳಿಸಿದೆ.

error: Content is protected !! Not allowed copy content from janadhvani.com