ಮಕ್ಕತುಲ್ ಮುಕರ್ರಮಃ: ಮಕ್ಕಾದ ಮಸ್ಜಿದುಲ್ ಹರಾಂ(masjid al haram) ಮತ್ತು ಮದೀನಾದ ಮಸ್ಜಿದುನ್ನಬವಿ (Masjid Al nabavi) ಹರಂ ಶರೀಫ್ ಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಹೊಸ (Robot) ರೋಬೋಟ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ಎರಡೂ ಹರಂ ಕಚೇರಿಯ ಅಧೀನದ ಇಮಾಮ್ ಮತ್ತು ಮುಅದ್ದಿನ್ ಏಜೆನ್ಸಿಯಿಂದ ಹೊಸ ರೋಬೋಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಎರಡು ಹರಮ್ ಕಛೇರಿಯ ಮುಖ್ಯಸ್ಥ ಶೈಖ್ ಅಬ್ದುರ್ರಹ್ಮಾನ್ ಅಲ್ ಸುದೈಸ್ ಯೋಜನೆಯನ್ನು ಉದ್ಘಾಟಿಸಿದರು.
ಖುರ್‌ಆನ್ ಪಠಣ, ಖುತ್ಬಾ ಮತ್ತು ಅಝಾನ್ ಕರೆಗಳಿಗೆ ಸಂಬಂಧಿಸಿದ ವಿಷಯಗಳನ್ನು ತಿಳಿದುಕೊಳ್ಳಲು ಬಯಸುವವರು ಹೊಸ ರೋಬೋಟ್‌ಗಳಿಂದ ಸಹಾಯ ಪಡೆಯಬಹುದಾಗಿದೆ. ಕೃತಕ ಬುದ್ಧಿಮತ್ತೆ ಸೇವೆಗಳನ್ನು ಹೆಚ್ಚಿಸುವ ಮೂಲಕ ಸ್ಮಾರ್ಟ್ ರೋಬೋಟ್‌ಗಳ ಬಳಕೆಯನ್ನು ಹೆಚ್ಚಿಸುವುದಾಗಿದೆ ಇದರ ಗುರಿ.
ಖುರ್‌ಆನ್ ಪಠಣ, ಖುತ್ಬಾ ಮತ್ತು ಅಝಾನ್ ಕರೆಗಳಿಗೆ ಸಂಬಂಧಿಸಿದ QR ಕೋಡ್‌ಗಳನ್ನು ಪ್ರದರ್ಶಿಸುವುದಾಗಿದೆ ರೋಬೋಟ್‌ನ ಕೆಲಸ.
ಸ್ಮಾರ್ಟ್ ಫೋನ್ ಬಳಸಿ, ಅಪ್ಲಿಕೇಶನ್ ಅನ್ನು ಸ್ಕ್ಯಾನ್ ಮಾಡಿ ಡೌನ್‌ಲೋಡ್ ಮಾಡಬಹುದು. ರೋಬೋಟ್‌ನಲ್ಲಿ ಧ್ವನಿ ಆಜ್ಞೆಗಳ ಮೂಲಕ ಇಮಾಮ್‌ಗಳ ಮತ್ತು ಮುಅದ್ದೀನ್‌ಗಳ ವಿವರಗಳು, ವಾರದ ವೇಳಾಪಟ್ಟಿಗಳು, ಶುಕ್ರವಾರದ ಧರ್ಮೋಪದೇಶ ಇತ್ಯಾದಿಗಳ ಬಗ್ಗೆ ಸಾಮಾನ್ಯ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಶೀಘ್ರದಲ್ಲೇ ಇನ್ನಷ್ಟು ರೋಬೋಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಎರಡೂ ಹರಂ ಕಚೇರಿಯ ಮುಖ್ಯಸ್ಥ ಶೈಖ್ ಅಬ್ದುರ್ರಹ್ಮಾನ್ ಅಲ್ ಸುದೈಸ್ ಹೇಳಿದ್ದಾರೆ.