janadhvani

Kannada Online News Paper

ರಿಯಾಳುಲ್ ಮದೀನಾ ಸ್ಟೂಡೆಂಟ್ ಅಸೋಸಿಯೇಷನ್: ನೂತನ ಸಾರಥ್ಯ

ಮಂಗಳೂರು: ಮಂಜನಾಡಿ ಅಲ್ ಮದೀನಾ ರಿಸಾಲ ಅಕಾಡಮಿ ವಿದ್ಯಾರ್ಥಿಗಳ ಸಂಘಟನೆಯಾದ ರಿಯಾಳುಲ್ ಮದೀನಾ ಸ್ಟೂಡೆಂಟ್ ಅಸೋಸಿಯೇಷನ್ ನ ಮಹಾಸಭೆಯು ಪ್ರಾಂಶುಪಾಲರಾದ ಇಕ್ಬಾಲ್ ಮರ್ಝೂಖಿ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಜುನೈದ್ ಮರ್ಝೂಖಿಯವರು ಸಭೆಯನ್ನು ಉದ್ಘಾಟಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸುಹಾನ್ ಕೈಕಂಬ, ಪ್ರ.ಕಾರ್ಯದರ್ಶಿ ಶಾಹಿಂ ಉಪ್ಪಿನಂಗಡಿ, ಕೋಶಾಧಿಕಾರಿಯಾಗಿ ಹಾಫಿಳ್ ಮಡವೂರ್ ನಗರ ರವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಆಸಿಫ್ ಸಕಲೇಶಪುರ, ಜೊತೆ ಕಾರ್ಯದರ್ಶಿಯಾಗಿ ಸಾಹಿಕ್ ಇನೋಳಿ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಮ್ಮಾಸ್ ಗಡಿಯಾರ್, ಶಂಸುದ್ದೀನ್ ಉಳ್ಳಾಲ, ಜಲಾಲ್ ಮಾಚಾರ್, ನೌಝಾನ್ ನೆತ್ತಿಲಪದವು, ಅಫ್ರೀದ್ ಪರಪ್ಪು, ರಝೀನ್ ಮಲಾರ್, ಮಿಸ್ಹಾಬ್ ಅಡ್ಕರೆಪಡಪ್ಪು ರವರನ್ನು ಆಯ್ಕೆ ಮಾಡಲಾಯಿತು.

ಸಾಹಿಕ್ ಇನೋಲಿ ಸ್ವಾಗತಿಸಿ ನೂತನ ಪ್ರ.ಕಾರ್ಯದರ್ಶಿ ಶಾಹಿಂ ಉಪ್ಪಿನಂಗಡಿ ವಂಧಿಸಿದರು.