janadhvani

Kannada Online News Paper

ಎಸ್.ವೈ.ಎಸ್ ಕುಂತೂರು ಯುನಿಟ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಕುಂತೂರು, ಆಗಷ್ಟು 15:- ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ (SYS) ಹಾಗೂ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫಡರೇಶನ್ (SSF) ಕುಂತೂರು ಯುನಿಟ್ ವತಿಯಿಂದ ಅಮೃತ ಮಹೋತ್ಸವ 75 ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಅಬೂಬಕ್ಕರ್ ಸಖಾಫಿ ಆಲಂಕಾರು ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಅಬ್ದುರ್ರಝಾಖ್ ಲತೀಫಿ ಕುಂತೂರು ಹಾಗೂ ಅಬ್ಬಾಸ್ ಕೆ ಎಸ್ ಆರ್ ಟಿ ಸಿ ಸಾಂದರ್ಭಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಹಮೀದ್ ಕೆ ಆರ್, ಹನೀಫ್ ಮುಡುಪಿನಡ್ಕ, ಕಾರ್ಯದರ್ಶಿ ಯು ಕೆ ಹಮೀದ್, ಅಬ್ದುಲ್ ರಝಾಕ್ ಕೆಳಗಿನ ಪೇಟೆ, ಸದಸ್ಯರಾದ ಹನೀಫ್ ಕೆ ಎಸ್ ಆರ್ ಟಿ ಸಿ, ಮುಸ್ತಫಾ ಗಾಂಜಾಲ್, ನಾಸಿರ್ ಕೋಚಕಟ್ಟೆ, ಮುಹಮ್ಮದ್ ಅಲಿ ಮರುವಂತಿಲ, ನಾಸೀರ್ ಪೂಂಜಾ, ನೌಶಾದ್ ಕೋಚಕಟ್ಟೆ, ಅಬ್ದುಲ್ ಲತೀಫ್ ಅಂಗಡಿ ,ಖಲೀಲ್ ಪಿ ಕೆ, ರಮೀಝ್ ನೇರೆಂಕಿ, ಹಂಝ ಅಜ್ಮೀರ್ ಶರೀಫ್, ರಫೀಕ್ ಸಾಲೆತಡ್ಕ, ಇಕ್ಬಾಲ್ ಪೂಂಜ, ತಮೀಮ್ ಚಾಲ್ಕರೆ ಹಾಗೂ ಹಲವಾರು ಸದಸ್ಯರು ಉಪಸ್ಥಿತರಿದ್ದರು.