ಕೈರಂಗಳ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಇಲ್ಲಿನ ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ವತಿಯಿಂದ ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆಯ ನಿರ್ದೇಶಕರಾದ ಹೈದರ್ ಕೈರಂಗಳ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಭಾರತದ ಅಮೃತಗಳಿಗೆಯಲ್ಲಿ ಸಂಭ್ರಮಿಸಿದ ತ್ರಿವರ್ಣ ಧ್ವಜಗಳು ಮೌಲ್ಯ ಕಳೆದುಕೊಳ್ಳದಂತೆ ಸುರಕ್ಷಿತವಾಗಿಡಬೇಕೆಂದು ಸಲಹೆ ನೀಡಿ, ಸ್ವಾತಂತ್ರ್ಯದ ಶುಭಾಶಯಗಳನ್ನು ಕೋರಿದರು.ಸಮಾರಂಭದ ಅಧ್ಯಕ್ಷತೆಯನ್ನು ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಸಂಸ್ಥೆಯ ಅಧ್ಯಕ್ಷರಾದ ಶರೀಫ್ ಸುಟ್ಟ ವಹಿಸಿದರು.
ಸ್ಥಳೀಯ ತೋಟಾಲ್ ಜುಮಾ ಮಸೀದಿ ಖತೀಬರಾದ ಅಲ್ಹಾಜ್ ಮುಹಿಯ್ಯದ್ದೀನ್ ಸಅದಿ ತೋಟಾಲ್ ದುವಾ ನೆರವೇರಿಸಿ ಸ್ವಾತಂತ್ರ್ಯ ಸಂದೇಶ ಭಾಷಣಗೈದರು. ಇದೇ ಸಂದರ್ಭದಲ್ಲಿ ಅಂಬರ್ ವ್ಯಾಲಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಅಬ್ದುಲ್ ಅಝೀಝ್ ಮೊಂಟೆಪದವು ಮತ್ತು ಕೈರಂಗಳ ಶಾಲಾ ಶಿಕ್ಷಕರಾದ ದೇವದಾಸ್ ಮಾಸ್ಟರ್ ಇವರನ್ನು ಸನ್ಮಾನಿಸಲಾಯಿತು.
ತೋಟಾಲ್ ಜುಮಾ ಮಸೀದಿ ಅಧ್ಯಕ್ಷರಾದ ಮೂಸಕುಂಙಿ ಹಾಜಿ ಪಾರೆ, ಗೌಸಿಯಾಯಂಗ್ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಹೈದರ್ ಮಲಿ, ಸಂಸ್ಥೆಯ ನಿರ್ದೇಶಕರಾದ ಟಿ.ಕೆ ಸಫ್ವಾನ್ ಶರೀಫ್, ಇಕ್ಬಾಲ್ ಕೈರಂಗಳ, SYS D.G ಕಟ್ಟೆ ಅಧ್ಯಕ್ಷ ಅಬ್ದುಲ್ ರಹಿಮಾನ್, ತೋಟಾಲ್ ಜುಮಾ ಮಸೀದಿ ಪ್ರ.ಕಾರ್ಯದರ್ಶಿ ಶರೀಫ್ ಟಿ.ಎಚ್, ಕಾರ್ಯದರ್ಶಿ ಅಹ್ಮದ್ ಕುಂಙಿ, SSF ಡಿ.ಜಿ ಕಟ್ಟೆ ಅಧ್ಯಕ್ಷ ಇಕ್ಬಾಲ್ ಸುಟ್ಟ ಮತ್ತಿತರರು ಉಪಸ್ಥಿತರಿದ್ದರು.
ಸದಸ್ಯರಾದ ಮಹಮ್ಮದ್ ಸಿನಾನ್ ಸುಟ್ಟ ಸ್ವಾಗತಿಸಿ, ಪ್ರ.ಕಾರ್ಯದರ್ಶಿ ಹಂಝ ಧನ್ಯವಾದಗೈದರು.