ನೂರೂಲ್ ಹುದಾ ಜುಮಾ ಮಸ್ಜಿದ್ ಬಜಗೋಳಿ ಇದರ ಆಶ್ರಯದಲ್ಲಿ 76 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ 75 ವರ್ಷ ತುಂಬಿದ ಸಂಭ್ರಮದ ಅಮೃತ ಮಹೋತ್ಸವವ್ ಮಸ್ಜಿದ್ ಅಧ್ಯಕ್ಷರಾದ ಪುತ್ತಾಕ ಗುರ್ಗಲ್ ಗುಡ್ಡೆ ರವರ ಅಧ್ಯಕ್ಷತೆಯಲ್ಲಿ ಮಸ್ಜಿದ್ ವಠಾರ ದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಮಸ್ಜಿದ್ ಅಧ್ಯಕ್ಷರು ಪುತ್ತಾಕ ಹಾಗೂ ಮುಡಾರು ಗ್ರಾಮ ಪಂಚಾಯತ್ ಸದಸ್ಯರು ಆದ ರಜತ್ ರಾಮ್ ಮೋಹನ್ ಧ್ವಜಾರೋಹಣವನ್ನು ನೆರವೇರಿಸಿದರು. ಸಭೆ ಯನ್ನು ಉದ್ದೇಸಿಸಿ ಮಾತನಾಡಿದ ರಜತ್ ರಾಮ್ ಮೋಹನ್, ಎಲ್ಲಾ ಧರ್ಮೀಯರು ಎಲ್ಲಾ ವರ್ಗದವರು ಸಹಬಾಳ್ವೆಯಿಂದ ಬಾಳತಕ್ಕಂತ ಒಂದು ವ್ಯವಸ್ಥೆಯಿದ್ದರೆ ಅದು ನಮ್ಮ ಭಾರತದಲ್ಲಿ ಮಾತ್ರವಾಗಿದೆ ಎಂದು ಸಂದೇಶ ನುಡಿದರು.
ಜುಮಾ ಮಸ್ಜಿದ್ ಇದರ ಖತೀಬರು ಆದ ದಾವೂದ್ ಲತ್ವೀಫಿ ಉಸ್ತಾದ್ ರು ಮಾತನಾಡಿ ಸ್ವತಂತ್ರ ಭಾರತಕ್ಕಾಗಿ ಹೋರಾಟ ಎಷ್ಟು ಸತ್ಯವೋ ಅಷ್ಟೇ ಜಯವೂ ದಕ್ಕಿದೆ. ಸತ್ಯಕ್ಕೆ ಎಂದಿಗೂ ಸೋಲಿಲ್ಲ.
ಸತ್ಯಕ್ಕೆ ಜಯ ಖಚಿತ. ಸ್ವತಂತ್ರ ಭಾರತಕ್ಕಾಗಿ ಹೋರಾಡಿ ಮಡಿದ ಅದೆಷ್ಟೋ ಮಹಾ ನಾಯಕರುಗಳನ್ನು ಸ್ಮರಿಸಲೇ ಬೇಕಾಗಿದೆ ಎಂದರು.
ಜುಮಾ ಮಸ್ಜಿದ್ ಇದರ ಉಪಾಧ್ಯಕ್ಷರು ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ದಿಡಿಂಬಿರಿ, ಆಡಳಿತ ಕಮಿಟಿಯ ಪದಾಧಿಕಾರಿಗಳು, ಜಮಾಅತಿನ ಹಿರಿಯ, ಕಿರಿಯ, ಮದ್ರಸ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು..
ಜುಮಾ ಮಸ್ಜಿದ್ ಇದರ ಪ್ರ. ಕಾರ್ಯದರ್ಶಿ ಸೈಫುಲ್ಲಾ ಪರಪ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ ಧನ್ಯವಾದಗೈದರು.
ವರದಿ- ಸ್ವಾದಿಕ್ ಬಜಗೋಳಿ