ಎಸ್ ಎಸ್ ಎಫ್ ಇಪ್ಪತ್ತೊಂಬತ್ತನೆ ಕಾಸರಗೋಡು ಜಿಲ್ಲಾ ಸಾಹಿತ್ಯೋತ್ಸವವು ಗಾಳಿಮುಖ ಖಲೀಲ್ ಸ್ವಲಾಹ್ ಸಂಸ್ಥೆಯಲ್ಲಿ ಸಮಾಪ್ತಿಗೊಂಡಿತು. ಮೂರು ದಿನಗಳಲ್ಲಿ ನಡೆದ ಕಲಾ ಸಾಹಿತ್ಯ ಸ್ಪರ್ಧೆಗಳಲ್ಲಿ ಕುಂಬಳೆ ಡಿವಿಷನ್ 595 ಅಂಕಗಳೊಂದಿಗೆ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.
562 ಅಂಕಗಳೊಂದಿಗೆ ಉದುಮ ಡಿವಿಷನ್, 462 ಅಂಕಗಳೊಂದಿಗೆ ಕಾಸರಗೋಡು ಡಿವಿಷನ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ತನ್ನದಾಗಿಸಿಗೊಂಡಿತು.
ಕಲಾ ಪ್ರತಿಭೆಯಾಗಿ ಉದುಮ ಡಿವಿಷನಿನ ಹಾದಿ ಪರವನಡ್ಕ ಹಾಗೂ ಸರ್ಗ ಪ್ರತಿಭೆಯಾಗಿ ಕುಂಬಳೆ ಡಿವಿಷನಿನ ಮಾಲಿಕ್ ದೀನಾರ್ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿ ಮುಝಮ್ಮಿಲ್ ಆಯ್ಕೆಯಾದರು.
ಸಮಾರೋಪ ಸಮಾರಂಭವನ್ನು ಜಿಲ್ಲಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಪೂತಪ್ಪಲಮ್‌ರವರ ಅದ್ಯಕ್ಷತೆಯಲ್ಲಿ ಎಸ್ ವೈ ಎಸ್ ಜಿಲ್ಲಾಧ್ಯಕ್ಷರಾದ ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಳ್‌ಹರ್ ಉದ್ಘಾಟಿಸಿದರು.
ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂ ದುಆ ನೆರವೇರಿಸಿದರು. ಎಸ್ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಎನ್ ಜಾಫರ್ ಸ್ವಾದಿಕ್ ಅನುಮೋದನೆ ಭಾಷಣ ನಡೆಸಿದರು.
ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂ, ಸಯ್ಯಿದ್ ಮುನೀರುಲ್ ಅಹ್‌ದಲ್ ತಂಙಳ್, ಅಬ್ದುಲ್ ಖಾದಿರ್ ಸಖಾಫಿ ಕಾಟಿಪ್ಪಾರ, ಅಹ್ಮದ್ ಅಲಿ ಬಂಡಿಚ್ಚಾಲ್, ನಾಸರ್ ಪಲ್ಲಂಗೋಡ್, ಹಮೀದ್ ಪರಪ್ಪ ಟ್ರೋಫಿ ವಿತರಿಸಿದರು.
ಸಯ್ಯಿದ್ ಇಂಬಿಚ್ಚಿಕೋಯ ತಂಙಳ್, ಸಯ್ಯಿದ್ ಹನೀಫ್ ತಂಙಳ್, ಮೂಸ ಸಖಾಫಿ ಕಳತ್ತೂರ್, ಸಮೀರ್ ಸೈದಾರ್ಪಳ್ಳಿ, ಉಮರ್ ಸಖಾಫಿ ಮುಹಿಮ್ಮಾತ್, ನಾಸರ್ ಪಲ್ಲಂಗೋಡ್, ಬಶೀರ್ ಸಖಾಫಿ ಕೊಲ್ಯಮ್, ಅಝೀಝ್ ಮಿಸ್ಬಾಹಿ ಈಶ್ವರಮಂಗಳ, ಅಬೂಬಕ್ಕರ್ ಆರ್ಳಪದವು, ಹಸನ್ ಕುಂಞಿ ಮಳ್‌ಹರ್, ಕೆ ಎಚ್ ಮಾಸ್ಟರ್, ಸಿದ್ದೀಕ್ ಪೂತಪ್ಪಲಮ್, ಕಬೀರ್ ಹಿಮಮಿ, ಉಮರ್ ಸಖಾಫಿ ಪಳ್ಳತ್ತೂರ್, ಹಾರಿಸ್ ಹಿಮಮಿ ಉಪಸ್ಥಿತರಿದ್ದರು.
ಮುಂದಿನ ವರ್ಷದ ಸಾಹೋತ್ಯೋಲ್ಸವ್‌ಗೆ ಕಾಸರಗೋಡ್ ಡಿವಿಷನ್ ಆತಿಥ್ಯ ವಹಿಸಲಿದೆ.
ಫಾರೂಕ್ ಪೊಸೋಟ್ ಸ್ವಾಗತ ಹಾಗೂ ನಂಶಾದ್ ಧನ್ಯವಾದ ಹೇಳಿದರು.