ಮಂಗಳೂರು :ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ ) ಸಂಸ್ಥೆಯ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಆಚರಣೆಯ ಸಲುವಾಗಿ ಬೃಹತ್ ರಕ್ತದಾನ ಶಿಬಿರವು ಎ.ಜೆ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಮಂಗಳೂರಿನ ಬಂದರ್ ರಸ್ತೆಯಲ್ಲಿ ಯಶಸ್ವಿಯಾಗಿ ಜರುಗಿತು.
ಈ ಶಿಬಿರವನ್ನು ಮಂಗಳೂರಿನ ಕೇಂದ್ರ ಮಸೀದಿಯ ಧರ್ಮ ಗುರುಗಳಾದ ಅಕ್ರಮ್ ಬಾಖವಿಗಳವರ ದುಆಶೀರ್ವಚನೆಯೊಂದಿಗೆ ಆರಂಭಿಸಲಾಯಿತು. ಕಳೆದು ಹೋದ ಮಹಾನ್ ವ್ಯಕ್ತಿಗಳ ಚರ್ಯೆಯನ್ನು ನೆನಪಿಸಿ ಇನ್ನೂ ಕೂಡಾ ಇಂತಹ ಸಮಾಜ ಕ್ಕೆ ಒಳಿತಾಗುವ ಕಾರ್ಯಕ್ರಮ ಮಾಡಲು ಸರ್ವಶಕ್ತನು ಅನುಗ್ರಹಿಸಲಿ ಎಂದು ಆಶೀರ್ವಧಿಸಿದರು.
ಅತಿಥಿ ಗೊಳಲ್ಲೊಬ್ಬರಾದ ಅಡ್ವೊಕೇಟ್ ಮುಹಮ್ಮದ್ ಹನೀಫ್ ಮಾತನಾಡಿ ಹಿಂದೂ ಮುಸ್ಲಿಂ ಕ್ರೈಸ್ತ ರೆಲ್ಲಾ ಒಂದೇ , ಎಲ್ಲಾ ಮನುಷ್ಯರೂ ಅವರು ವಸ್ತ್ರಗಳಿಂದ ಬೇರೆ ಬೇರೆ ಆದರೂ ಒಳಗಿಂದ ಒಂದೇ , ಎಲ್ಲರ ರಕ್ತ ಇತರ ಶರೀರದ ಭಾಗಗಳು ಒಂದೇ ,ಎಲ್ಲಕ್ಕಿಂತಾ ಬಹಳ ಪುಣ್ಯವಾದ ದಾನಗಳಲ್ಲಿ ಮೊದಲು ಬರುವುದು ರಕ್ತದಾನವೆಂದು ಹೇಳಿದರು.
ಪ್ರಪ್ರಥಮ ಬಾರಿಗೆ ಮಂಗಳೂರಿನ ವ್ಯಾಪಾರ ಕೇಂದ್ರ ವಾದ ಬಂದರಿನ ರಸ್ತೆಯಲ್ಲಿ ನೌಫಲ್ ಹೋಟೆಲಿನ ಹತ್ತಿರದ ಆರೀಫ್ ರವರ ಇನ್ನೂ ಉದ್ಘಾಟನೆ ಗೊಳ್ಳದ ಕಟ್ಟಡದಲ್ಲಿ ಸುಸಜ್ಜಿತವಾಗಿ, ಸಂಘಟನೆಯ ಸದಸ್ಯರ ಪರಿಶ್ರಮದ ಫಲವಾಗಿ ಸುಮಾರು 70 ರಷ್ಟು ಜನ ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು.
ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್
ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಸಂಸ್ಥೆಯು 25 ಮಂದಿ ಸ್ನೇಹಿತರಿಂದ ಅಶಕ್ತ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ಥಾಪನೆಗೊಂಡ ಒಂದು ಸಂಘಟನೆಯಾಗಿದ್ದು ,ತಮ್ಮಲ್ಲಿಯೇ ಮಾಸಿಕ ವಂತಿಗೆ ಹಣ ಸಂಗ್ರಹಣ ಮಾಡಿ ಅದನ್ನು ಆರಿಸಿದ, ಕಷ್ಟದಲ್ಲಿರುವ ಅಶಕ್ತ ರೋಗಿಗಳಿಗೆ ನೀಡುತ್ತಾ ಬಂದಿದೆ.