ಹಿಜರಿ ಇಸ್ಲಾಂ ಚರಿತ್ರೆಯ ಮೈಲುಗಲ್ಲು
ಕೆಸಿಎಫ್ ಕುವೈತ್ ನೋರ್ತ್ ಝೋನ್ ವತಿಯಿಂದ ಹಿಜರೀ ಸಂದೇಶ ಕಾರ್ಯಕ್ರಮವು ಆಗಸ್ಟ್ 5ರಂದು ಫರ್ವನಿಯಾ ತಾಜುಲ್ ಉಲಮಾ ಕೆಸಿಎಫ್ ಸೆಂಟರ್ ನಲ್ಲಿ ಕೆಸಿಎಫ್ ನೋರ್ತ್ ಝೋನ್ ಶಿಕ್ಷಣ ಅಧ್ಯಕ್ಷ ಬಹು ಬಶೀರ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಷ್ಟ್ರೀಯ ಸಮಿತಿಯ ಸಂಘಟನಾ ವಿಭಾಗದ ಅಧ್ಯಕ್ಷ ಬಹುಮಾನ್ಯ ಉಮರ್ ಝುಹುರಿ ರವರ ಪ್ರಾಥನೆ ಯೊಂದಿಗೆ ನೋರ್ತ್ ಝೋನ್ ಸಂಘಟನಾ ಕಾರ್ಯದರ್ಶಿ ಇಲ್ಯಾಸ್ ಮೊಂಟುಗೋಳಿ ರವರು ಸ್ವಾಗತಿಸಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಡ್ ರವರು ಉದ್ಘಾಟಿಸಿದರು.
ರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಅಧ್ಯಕ್ಷ ಬಹುಮಾನ್ಯ ಬಾದುಶಾ ಸಖಾಫಿಯವರು ಹಿಜಿರಾ ಸಂದೇಶ ಭಾಷಣ ನಡೆಸಿದರು. ರಾಷ್ಟ್ರೀಯ ಸಮಿತಿಯ ಪಬ್ಲಿಕೇಶನ್ ವಿಭಾಗದ ಅಧ್ಯಕ್ಷರಾದ ಬಹುಮಾನ್ಯ ಸಾಹುಲ್ ಹಮೀದ್ ಸಅದಿ ಝುಹುರಿ, ಕೆಸಿಎಫ್ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಹಾಜಿ ಮೂಸ ಇಬ್ರಾಹಿಂ, ಇಕ್ಬಾಲ್ ಎಡಪದವು, ಇಬ್ರಾಹಿಂ ಕಾಯರ್, ವಹೀಬ್ ಕೆಸಿರೋಡ್, ಇಕ್ಬಾಲ್ ಕಂದಾವರ ಹಾಗೂ ಇಸ್ಮಾಯಿಲ್ ಅಯ್ಯಂಗೇರಿ ಶುಭಾಶಯ ಕೋರಿ ಮಾತನಾಡಿದರು.
inc ಕೌನ್ಸಿಲ್ ಸದಸ್ಯರಾದ ಬಹುಮಾನ್ಯ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರು ಉಪದೇಶ ನಿರ್ದೇಶನ ನೀಡಿ ದುವಾ ಮಾಡಿದರು.
ಕುವೈಟ್ ಕೆಸಿಎಫ್ ರಾಷ್ಟ್ರೀಯ ಸಮಿತಿಯ ನೂತನ ಅಧ್ಯಕ್ಷರಾದ ಬಹು ಹುಸೈನ್ ಎರ್ಮಾಡ್ ಉಸ್ತಾದರಿಗೆ ನೋರ್ತ್ ಝೋನ್ ವತಿಯಿಂದ ಸಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿಯ ನಾಯಕರು ಝೋನ್ ನಾಯಕರು ಸೆಕ್ಟರ್ ನಾಯಕರು ಮತ್ತು ಎಲ್ಲಾ ಕೆಸಿಎಫ್ ನ ಸದಸ್ಯರು ಭಾಗವಹಿಸಿದ್ದರು. ನೋರ್ತ್ ಝೋನ್ ಶಿಕ್ಷಣ ಕಾರ್ಯದರ್ಶಿ ಜನಾಬ್ ಸಿರಾಜ್ ಸುಂಟಿಕೊಪ್ಪ ಧನ್ಯವಾದಗೈದರು.
ವರದಿ ಇಬ್ರಾಹಿಂ ವೇಣೂರು ಪಬ್ಲಿಕೇಶನ್ ವಿಭಾಗ ಕುವೈಟ್