ಜಾರಿಗೆಬೈಲು: SSF ಜಾರಿಗೆಬೈಲು, ನಾಳ ಇದರ ವತಿಯಿಂದ ಕಾಶ್ಮೀರದ ಕಥ್ ವಾ ಎಂಬಲ್ಲಿ 8 ವಯಸ್ಸಿನ ಬಾಲಕಿ ಆಸಿಫಾಳ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ “ಪೈಶಾಚಿಕ ಕೃತ್ಯವನ್ನು ವಿರೋಧಿಸಿ ಪ್ರತಿಭಟನೆ” ಯನ್ನು ದಿನಾಂಕ 16-04-18 ಸೋಮವಾರ ಸಂಜೆ 4:30 ಕ್ಕೆ ಸರಿಯಾಗಿ ಬದ್ರಿಯಾ ಜುಮ್ಮಾ ಮಸ್ಜಿದ್, ಜಾರಿಗೆಬೈಲು ಮಂಭಾಗದಲ್ಲಿ ನಡೆಸಲಾಯಿತು.ಸ್ಥಳಿಯ ಮುದರ್ರಿಸ್ ಅಬ್ದುರ್ರಹ್ಮಾನ್ ಬಾಖವಿ ಉಸ್ತಾದರು ದುಆ ನೆರವೇರಿಸಿದರು…ನಂತರ SSF ಜಾರಿಗೆಬೈಲು ಶಾಖೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ರವರು ಪ್ರತಿಭಟನೆಗೆ ಆಗಮಿಸಿದ ಸರ್ವರನ್ನೂ ಸ್ವಾಗತಿಸಿ, SSF ಜಾರಿಗೆಬೈಲು ಶಾಖೆ ಇದರ ಮಾಜಿ ಅದ್ಯಕ್ಷರು, BJM ಆಡಳಿತ ಸಮಿತಿಯ ಮುಖಂಡರು ಆದ ಕರೀಂ ಲತ್ವೀಫಿ ಉಸ್ತಾದರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನಂತರ SSF ದ.ಕ ಜಿಲ್ಲಾ ಸಮಿತಿಯ ನಾಯಕರು ಹಾಗೂ H.I.S ಮದ್ರಸ ಜಾರಿಗೆಬೈಲು ಇದರ ಪ್ರಾಂಶುಪಾಲರು ಆದ N.M ಶರೀಫ್ ಸಖಾಫಿ ಉಸ್ತಾದರು ಪ್ರತಿಭಟನೆಯನ್ನು ಉದ್ದೇಶಿಸಿ ಮುಖ್ಯಪ್ರಭಾಷಣ ಮಾಡಿ, ಘೋಷಣಾ ವಾಕ್ಯವನ್ನು ಹೇಳಿಕೊಟ್ಟರು.
ಪ್ರತಿಭಟನೆಯಲ್ಲಿ ಮುಖ್ಯ ಅತಿಥಿಯಾಗಿ BJM ಅಧ್ಯಕ್ಷರಾದ ಅಬ್ಬೋನ್ ಶಾಫಿ ಪಲ್ಲಾದೆ,SYS ಅಧ್ಯಕ್ಷರಾದ ರಫೀಕ್ ಮುಸ್ಲಿಯಾರ್, ಮದ್ರಸ ಅಧ್ಯಾಪಕರುಗಳಾದ ಅಬ್ದುರ್ರಝಾಕ್ ಸ-ಅದಿ, ಅಶ್ರಫ್ ಸ-ಅದಿ, ಸ್ಥಳೀಯ ನಾಯಕರಾದ ಇಲ್ಯಾಸ್ .N,SSF ಬೆಳ್ತಂಗಡಿ ಡಿವಿಶನ್ ನಾಯಕರಾದ ಕರೀಂ ಸಖಾಫಿ ಹಾಗೂ ಹಾರೀಸ್ ಕುಕ್ಕುಡಿ ಹಾಗೂ ಹಲವಾರು ಸಂಘಟನೆಯ ನಾಯಕರು ಮತ್ತು BJM ಆಡಳಿತ ಸಮಿತಿಯ ನಾಯಕರು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ SYS SSF SBS ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲಾಯಿತು.
ಕಾರ್ಯಕ್ರಮವನ್ನು SSF ಗುರುವಾಯನಕೆರೆ ಸೆಕ್ಟರ್ ನಾಯಕರಾದ ನವಾಝ್ ಮಾವಿನಕಟ್ಟೆ ನಿರೂಪಿಸಿ, ಅಲೀ ಕೆಮ್ಮಾರ ರವರು ವಂದಿಸಿದರು.
ಪ್ರತಿಭಟನೆಯ ಕೊನೆಯಲ್ಲಿ ಮರಣ ಹೊಂದಿದ ಆಸಿಫಾ ಎಂಬ ಬಾಲಕಿಯ ಮೇಲೆ ತಹ್ಲೀಲ್ ಸಮರ್ಪಿಸಲಾಯಿತು.