janadhvani

Kannada Online News Paper

SჄS ಮೂಡುಬಿದಿರೆ ಸೆಂಟರ್ ವತಿಯಿಂದ ಡಾಕ್ಟರ್ಸ್ ಡೇ ಆಚರಣೆ

ಜುಲೈ 1 ಡಾಕ್ಟರ್ಸ್ ಡೇ ಅಂಗವಾಗಿ ಎಸ್.ವೈ.ಎಸ್ ಮೂಡುಬಿದಿರೆ ಸೆಂಟರ್ ಟೀಂ ಇಸಾಬಾ ವತಿಯಿಂದ ಮಧ್ಯಾಹ್ನ 3:30 ಗಂಟೆಗೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಲ್ ಮೂಡಬಿದಿರೆಯಲ್ಲಿ ಎಸ್.ವೈ.ಎಸ್ ಮೂಡುಬಿದಿರೆ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಸಲಾಂ ಮದನಿ ರವರ ಅಧ್ಯಕ್ಷತೆಯಲ್ಲಿ 6 ವೈದ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಎಸ್ ವೈ ಎಸ್ ಮೂಡಬಿದಿರೆ ಸೆಂಟರ್ ಟೀಂ ಇಸಾಬಾ ಅಮೀರ್ ಮುತ್ತಲಿಬ್ ರವರು ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕೆ.ಜಿ.ಎನ್ ಮಿತ್ತೂರು ಮುಖ್ಯೋಪಾಧ್ಯಾಯರಾದ ಹುಸೈನ್ ಅಹ್ಸನಿ ಅಲ್ ಮುಈನಿ ಮಾರ್ನಾಡ್ ಸಂದೇಶ ಭಾಷಣ ಮಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಮೂಡಬಿದಿರೆಯ ಹಿರಿಯ ವೈದ್ಯಾಧಿಕಾರಿ ಡಾ. ಸಶೀಕಲ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಡಾ. ನೆಫಿಸ , ಡಾ. ಸಂಗೀತ , ಡಾ. ಸೈನಾಝ್, ಡಾ.ರೇವೆಂತ್, ಎಸ್.ವೈ.ಎಸ್ ಮೂಡಬಿದ್ರೆ ಸೆಂಟರ್ ಸೋಷಿಯಲ್ ಕಾರ್ಯದರ್ಶಿ ಅಬ್ದುಲ್ ಖಾದರ್ ಗುಂಡುಕಲ್ಲು, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಮೂಡುಬಿದಿರೆ, ಸದಸ್ಯರಾದ ಉಮರಬ್ಬ ತೊಡಾರ್, ಅಬ್ದುಲ್ ಅಝೀಝ್ ಸ‌ಅದಿ ಮಾರ್ನಾಡ್, ಸಿದ್ದೀಕ್ ಸಖಾಫಿ ಮಾರ್ನಾಡ್, ಶರೀಫ್ ಹೊಸಂಗಡಿ, ಎಸ್ಸೆಸ್ಸೆಫ್ ಮೂಡಬಿದ್ರೆ ಸೆಕ್ಟರ್ ಅಧ್ಯಕ್ಷರಾದ ಇಕ್ಬಾಲ್ ಹನೀಫಿ ಮಾರ್ನಾಡ್, ಕ್ಯೂ.ಡಿ ಕಾರ್ಯದರ್ಶಿ ಸಿದ್ದೀಕ್ ಬಳ್ಕುಂಜೆ, ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿ ರಿಳ್ವಾನ್ ಗುಂಡುಕಲ್ಲು, ಹಾಗೂ ಎಸ್ ವೈ ಎಸ್, ಎಸ್ಸೆಸ್ಸೆಫ್ ಕಾರ್ಯಕರ್ತರು, ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಸ್.ವೈ.ಎಸ್ ಮೂಡುಬಿದಿರೆ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ (ಉಳ್ಳಾಲ) ನಿರೂಪಿಸಿದರು.