ಶಾರ್ಜಾ: ಶಾರ್ಜಾದ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಭಾರತೀಯರ ಸಮೇತ ವಿದೇಶೀಯರಿಗೆ 10% ಶೇಕಡಾ ಸಂಬಳ ಹೆಚ್ಚಿಸಲಾಗಿದೆ. ಈ ವರ್ಷ ಜನವರಿಯಿಂದ ಇದು ಜಾರಿಯಾಗಲಿದೆ.
ಯುಎಇನ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಶಾರ್ಜಾದ ಆಡಳಿತಗಾರ ಶೈಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿಯವರು ವೇತನ ಹೆಚ್ಚಳಕ್ಕೆ ಆದೇಶ ನೀಡಿದ್ದಾರೆ. ಶೈಖ್ ಡಾ. ಸುಲ್ತಾನ್ ಅವರ ವಿಡಿಯೋ ಶಾರ್ಜಾ ಸರ್ಕಾರೀ ಇಲಾಖೆಗಳಲ್ಲಿ ಉದ್ಯೋಗ ಹೊಂದಿದ ಪ್ರತಿಯೊಬ್ಬರೂ ವೇತನ ಏರಿಕೆಯಾಗಲಿದೆ ಎಂದು ತೋರಿಸುತ್ತಿದೆ.
ಆರಂಭದಲ್ಲಿ ದೇಶೀಯ ನೌಕರರಿಗೆ ಸಂಬಳ ಹೆಚ್ಚಳಕ್ಕೆ ನಿರ್ದೇಶನ ನೀಡಲಾಗಿತ್ತು . ನಂತರ, ವಿದೇಶಿಯರಿಗೂ ಸಂಬಳ ಹೆಚ್ಚಿಸಲು ಆದೇಶಿಸಲಾಗಿದೆ.
ಸಂಬಳ ಹೆಚ್ಚಳಕ್ಕೆ ಸುಮಾರು 600 ದಶಲಕ್ಷ ದಿರ್ಹಂ ಸರಕಾರಕ್ಕೆ ಖರ್ಚು ಹೆಚ್ಚಲಿದೆ. ಶಾರ್ಜಾ ದಲ್ಲಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಅನೇಕ ಭಾರತೀಯರು ಕೆಲಸ ಮಾಡುತ್ತಿದ್ದಾರೆ.
ದೈನಂದಿನ ಜೀವನ ವೆಚ್ಚವು ಅಧಿಕವಾಗಿರುವ ಸನ್ನಿವೇಶದಲ್ಲಿ ಈ ಸಂಬಳ ಹೆಚ್ಚಳವು ಒಂದು ದೊಡ್ಡ ಪರಿಹಾರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.