janadhvani

Kannada Online News Paper

ಆತಿಫ್ ಶಿವಮೊಗ್ಗ ಎಂಬ ಹೆಸರಿನಲ್ಲಿ ಮುಗ್ದರನ್ನು ವಂಚಿಸುತ್ತಿರುವ ಭೂಪ- ಎಚ್ಚರಿಕೆ

ಬೆಂಗಳೂರು: ತನ್ನ ವಾಟ್ಸಾಪ್ ಕಾಂಟಾಕ್ಟ್ ನಲ್ಲಿರುವ ಸ್ನೇಹಿತರಲ್ಲಿ ಕಷ್ಟ ಕಥೆಗಳನ್ನು ಹೇಳಿ ಹಣ ಲಪಟಾಯಿಸುತ್ತಿರುವ ವಂಚಕನ ಬಗ್ಗೆ ಎಚ್ಚರಿಕೆ.

ಈತ ಆತೀಫ್ ರಹ್ಮಾನ್ ಎಂಬ ಹೆಸರಿನಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಹೊಂದಿದ್ದಾನೆ. ತಾನು ವಿದೇಶಕ್ಕೆ ತೆರಳುತ್ತಿದ್ದೇನೆ, ಆದರೆ ಇಮಿಗ್ರೇಷನ್ ತೊಂದರೆಯಿಂದಾಗಿ ಸಿಲುಕಿದ್ದೇನೆ. ವಿದೇಶದಿಂದ ಹಣ ಕಳಿಸಿದ್ರೆ ಇಮಿಗ್ರೇಷನ್ ಕ್ಲಿಯರ್ ಆಗುತ್ತೆ ಆ ಹಣವನ್ನು ನಿಮ್ಮ ಊರಲ್ಲಿರುವ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇನೆ ಎಂದು ನಂಬಿಸಿ ಮುಗ್ದರನ್ನು ವಂಚಿಸಿ ಹಣ ಲಪಟಾಯಿಸುತ್ತಾನೆ.

ಆತಿಫ್ ಎಂಬ ವ್ಯಕ್ತಿಯ ಸಿಮ್, ಆಧಾರ್ ಮತ್ತು ಪಾನ್ ಕಾರ್ಡ್ ನ್ನು ಈತ ಲಪಟಾಯಿಸಿ ವಂಚಿಸುತ್ತಿರುವುದಾಗಿ ಸಂದೇಹ ಉಂಟಾಗಿದೆ. ಈತನೊಂದಿಗೆ ಬ್ಯಾಂಕ್ ಉದ್ಯೋಗಸ್ಥರು ಶಾಮೀಲಾಗಿರುವ ಬಗ್ಗೆ ಸಂಶಯ ಉದ್ಭವಿಸಿದೆ.

ವಿದೇಶದಿಂದ ಕಳಿಸುಕೊಡುವ ಮೊತ್ತವನ್ನು ಈತ ಊರಿನಲ್ಲಿರುವ ತಮ್ಮ ಬ್ಯಾಂಕ್ ಎಕೌಂಟ್ ಗೆ ವರ್ಗಾಯಿಸಿದ್ದಾಗಿ ಬ್ಯಾಂಕ್ ಡಿಪೋಸಿಟ್ ಮಾಡಿ ಮೊಹರು ಹಾಕಿರುವ ರಶೀದಿಯನ್ನು ನೀಡುತ್ತಾನೆ. ಆದರೆ, ಅದು ನಕಲಿಯಾಗಿರುತ್ತದೆ.

ಈ ರೀತಿ ಬೇರೆ ಬೇರೆ ಶೈಲಿಯಲ್ಲಿ ಮುಗ್ದರನ್ನು ವಂಚಿಸುತ್ತಿರುವ ಈತನನ್ನು ಕೂಡಲೇ ಬಂಧಿಸಿ, ಕಾನೂನಿನ ಮುಂದೆ ತರಬೇಕಾಗಿದೆ. ಈಗಾಗಲೇ ಹಲವು ಮಂದಿಗೆ ಪಂಗನಾಮ ಹಾಕಿರುವ ಈತನ ವಂಚನೆಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.