ರಿಯಾದ್, ಜೂ.23: ಸೌದಿ ಅರೇಬಿಯಾ ಮತ್ತೆ ಆರು ವಲಯಗಳಲ್ಲಿ ದೇಶೀಕರಣವನ್ನು ಘೋಷಿಸಿದೆ. ಏಳು ಮಾರಾಟ ಮಳಿಗೆಗಳು, ವಾಹನಗಳ ಆವರ್ತಕ(ಪಿರಿಯೋಡಿಕ್) ತಪಾಸಣೆ, ಅಂಚೆ ಮತ್ತು ಪಾರ್ಸೆಲ್ ಸೇವೆ, ಗ್ರಾಹಕ ಸೇವೆ, ವಾಯುಯಾನ ಮತ್ತು ದೃಗ್ವಿಜ್ಞಾನ(ಒಪ್ಟಿಕ್ಸ್) ಮುಂತಾದವುಗಳು ಸ್ವದೇಶೀಕರಣದ ಸಾಲಿಗೆ ಸೇರಲಿದೆ.
ಮುಂದಿನ ಮಾರ್ಚ್ ನಿಂದ ಕಾನೂನು ಜಾರಿಗೆ ಬರಲಿದೆ ಎಂದು ಸೌದಿ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಅಹ್ಮದ್ ಸುಲೈಮಾನ್ ಅಲ್ ರಾಜಿ ಘೋಷಣೆ ಮಾಡಿದ್ದಾರೆ. ಈ ಯೋಜನೆಯು 33000 ಸ್ಥಳೀಯರಿಗೆ ಉದ್ಯೋಗವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ವಲಯಗಳಲ್ಲಿ ಭಾರತೀಯರು ಸಹಿತವಿರುವ ಹೆಚ್ಚಿನ ವಿದೇಶೀಯರು ಉದ್ಯೋಗದಲ್ಲಿದ್ದು, ಹೊಸ ಯೋಜನೆಯು ವಲಸಿಗರನ್ನು ಆತಂಕಕ್ಕೀಡುಮಾಡಿದೆ.
ಆಪ್ಟಿಕ್ಸ್ ವಲಯದ ಶೇಕಡ 50ರಷ್ಟು ಮತ್ತು ಗ್ರಾಹಕ ಸೇವಾ ಹುದ್ದೆಗಳಲ್ಲಿ ಶೇಕಡ 100ರಷ್ಟು ಹುದ್ದೆಗಳನ್ನು ಸ್ಥಳೀಯರೇ ತುಂಬಬೇಕು. ತಾಂತ್ರಿಕ ನಿಯತಕಾಲಿಕಗಳ(ಟೆಕ್ನಿಕಲ್ ಪಿರಿಯೋಡಿಕಲ್) ವಲಯದಲ್ಲಿ ಎರಡು ಹಂತಗಳಲ್ಲಾಗೀ 100 ಶೇ. ಮತ್ತು ಅಂಚೆ ಮತ್ತು ಪಾರ್ಸೆಲ್ ವಲಯದಲ್ಲಿ 70. ಶೇ. ಸ್ಥಳೀಯ ಉದ್ಯೋಗಿಗಳನ್ನು ನೇಮಕ ಮಾಡಬೇಕು.