ಸಿರಾಜುಲ್ ಹುದಾ ಅರೇಬಿಕ್ ಮದ್ರಸ ಉಣ್ಣಾಲು ವಿದ್ಯಾರ್ಥಿಗಳ ಸಂಘಟನೆಯಾದ SBS ಉಣ್ಣಾಲು ಶಾಖೆಯ ವಾರ್ಷಿಕ ಮಹಾ ಸಭೆಯು ಜೂ.11 ಶನಿವಾರ ಬೆಳಿಗ್ಗೆ ಇಲ್ಲಿನ ಮದ್ರಸಾದಲ್ಲಿ ಜರುಗಿತು.
2022-23 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಯೂಸುಫ್ ಮುಹಮ್ಮದ್ ಮುಸ್ತಫಾ,
ಪ್ರ.ಕಾರ್ಯದರ್ಶಿ ಅಹಮ್ಮದ್ ಬಾರಿ ಕೋಶಾಧಿಕಾರಿ ಯಾಗಿ ಮುಹಮ್ಮದ್ ರಶಾದ್ ಉಪಾಧ್ಯಕ್ಷರಾಗಿ ಸಾಹಿರ್ , ಹಾಗೂ ಜೊ.ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಆಯ್ಕೆಯಾದರು.
ಸ್ಥಳೀಯ ಖತೀಬ್ ಹಾಗೂ ಸದರ್ ಮುಅಲ್ಲಿಂ ಜುನೈದ್ ರಝಾ ಅಝ್ಹರಿ ಉಸ್ತಾದ್ ದುಃಆ ನೆರವೇರಿಸಿ ನೂತನ ಸಮಿತಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಬಾಗವಹಿಸಿದ್ದರು.
ಮದ್ರಸಾ ಮುಅಲ್ಲಿಂ ಉಮರುಲ್ ಫಾರೂಕ್ ಸಅದಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು.ಅಬ್ದುಲ್ ರಹಿಮಾನ್ ಸ್ವಾಗತಿಸಿ ನೂತನ ಕಾರ್ಯದರ್ಶಿ ಅಹಮ್ಮದ್ ಬಾರಿ ವಂದಿಸಿದರು.