janadhvani

Kannada Online News Paper

ಕೆಸಿಎಫ್ ಖತ್ತರ್ ವಾರ್ಷಿಕ ಮಹಾಸಭೆ – ನೂತನ ಸಾರಥಿಗಳ ಆಯ್ಕೆ

ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಖತ್ತರ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ಜೂನ್ 3 ರಂದು ದೋಹಾದಲ್ಲಿ ಜರಗಿತು. ಕಾರ್ಯಕ್ರಮ ಹಾಫಿಲ್ ಉಮರುಲ್ ಫಾರೂಕ್ ಸಖಾಫಿ ಎಮ್ಮೆಮಾಡು ರವರ ದುಆ ದೊಂದಿಗೆ ಪ್ರಾರಂಭವಾಯ್ತು. ಇಕ್ಬಾಲ್ ಪುಂಜಾಲಕಟ್ಟೆ ಫ್ಲಾಗ್ ಆನ್ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮ ಶಿಕ್ಷಣ ವಿಭಾಗ ಅಧ್ಯಕ್ಷ ಅಬ್ದುಲ್ ಸತ್ತಾರ್ ಅಶ್ರಫಿ ಮಠ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷತೆ ಭಾಷಣಗೈದ ಯೂಸುಫ್ ಸಖಾಫಿ ರವರು ನಾಯಕರ ಜವಾಬ್ಧಾರಿ ಹಾಗೂ ಕೆಸಿಎಫ್ ಸಂಘಟನೆಗೆ ಜನರ ಒಲವಿನ ಬಗ್ಗೆ ವಿವರಿಸಿದರು. ಉದ್ಘಾಟನಾ ಭಾಷಣಗೈದ ಸತ್ತಾರ್ ಅಶ್ರಫಿಮಠ ರವರು ದ’ಅ್’ವಾ ಕಾರ್ಯಾಚರಣೆಗೈಯ್ಯುವಾಗ ಎದುರಾಗುವ ಸಮಸ್ಯೆಗಳು ಹಾಗೂ ನಾವು ಮಾಡುವ ಕಾರ್ಯಾಚರಣೆ ನಿಷ್ಕಳಂಕತೆಯಿಂದ ಕೂಡಿರಬೇಕು ಎಂದು ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅಬ್ದುಲ್ ಹಕೀಂ ಪಾತೂರು ಹಾಗೂ ಜಮಾಲ್ ಮೂಡಬಿದ್ರೆ ಕ್ರಮವಾಗಿ ಆಯತ್ ಆಫ್ ದಿ ಮಿನಿಟ್ ಮತ್ತು ಮೋಟಿವೇಷನ್ ಆಫ್ ದಿ ಮಿನಿಟ್ ನಡೆಸಿದರು

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಹಂಡುಗುಳಿ, ಸಂಘಟನಾ ವಿಭಾಗ ಕಾರ್ಯದರ್ಶಿ ಮಿರ್ಶಾದ್ ಕನ್ಯಾನ, ಸಾಂತ್ವನ ವಿಭಾಗದ ಸದಸ್ಯರಾದ ಸಿದ್ದೀಖ್ ಕೃಷ್ಣಾಪುರ, ಶಿಕ್ಷಣ ವಿಭಾಗ ಕಾರ್ಯದರ್ಶಿ ಖಾಲಿದ್ ಹಿಮಮಿ, ಇಹ್ಸಾನ್ ವಿಭಾಗ ಕಾರ್ಯದರ್ಶಿ ಅಶ್ರಫ್ ವಲಚ್ಚಿಳ್ ಕ್ರಮವಾಗಿ ಸಾಮಾನ್ಯ, ಸಂಘಟನಾ, ಸಾಂತ್ವನ, ಶಿಕ್ಷಣ ಹಾಗೂ ಇಹ್ಸಾನ್ ವಿಭಾಗದ 2019-22 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ರಾಷ್ಟ್ರೀಯ ಸಂಘಟನಾ ವಿಭಾಗ ಅಧ್ಯಕ್ಷರಾದ ಹನೀಫ್ ಪಾತೂರು ರವರು 2019-22ನೇ ಸಾಲಿನ ಲೆಕ್ಕಪತ್ರವನ್ನು ಮಂಡಿಸಿದರು.

ಪ್ರಸ್ತುತ ಸಮಿತಿಯನ್ನು ಬರ್ಕಾಸ್ತು ಮಾಡಿ, ನೂತನ ಸಮಿತಿಯ ರಚನೆಯ ನೇತೃತ್ವವನ್ನು ರೀ ಆರ್ಗನೈಝಿಂಗ್ ಆಫೀಸರ್ ಆಗಿ ಆಗಮಿಸಿದ ಕೆಸಿಎಫ್ ಅಂತರರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮ್ಮಾಡು ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮಗೆ ಸೃಷ್ಠಿಕರ್ತನಿಂದ ನೈಸರ್ಗಿಕವಾಗಿ ಸಿಗುವ ಎರಡು ಬಹುದೊಡ್ಡ ಕೊಡುಗೆಯಾದ ಬಿಡುವು ಮತ್ತು ಆರೋಗ್ಯ ವನ್ನು ನಾವು ಯಾವ ರೀತಿಯಲ್ಲಿ ವ್ಯಯಿಸಬೇಕು, ನಮ್ಮ ಸ್ವಭಾವ ಯಾವ ರೀತಿಯಲ್ಲಾಗಿರಬೇಕು ಎಂಬುದರ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಪಾತೂರು, ಪ್ರಧಾನ ಕಾರ್ಯದರ್ಶಿಯಾಗಿ ಉಮರ್ ಫಾರೂಕ್ ಕೃಷ್ಣಾಪುರ, ಕೋಶಾಧಿಕಾರಿಯಾಗಿ ಮುನೀರ್ ಮಾಗುಂಡಿ, ಸಂಘಟನಾಧ್ಯಕ್ಷರಾಗಿ ಮಿರ್ಷಾದ್ ಕನ್ಯಾನ, ಕಾರ್ಯದರ್ಶಿ ರಿಶಾದ್ ಮಧುವನ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಖಾಲಿದ್ ಹಿಮಮಿ ಬೋಳಂತೂರು, ಕಾರ್ಯದರ್ಶಿ ಸಾದಿಕ್ ಮೂಳೂರು, ಆಡಳಿತ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ಸತ್ತಾರ್ ಅಶ್ರಫಿ ಮಠ, ಕಾರ್ಯದರ್ಶಿ ಅಬ್ದುಲ್ ಹಕೀಂ ಪಾತೂರು, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಇಖ್ಬಾಲ್ ಪುಂಜಾಲಕಟ್ಟೆ, ಕಾರ್ಯದರ್ಶಿ ಸಿದ್ದೀಕ್ ಕೃಷ್ಣಾಪುರ, ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಅಶ್ರಫ್ ವಳಚ್ಚಿಲ್, ಕಾರ್ಯದರ್ಶಿ ಅಶ್ರಫ್ ಕಾವಳಕಟ್ಟೆ, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಯಹ್ಯ ಸಅದಿ ಕೊಡಗು, ಕಾರ್ಯದರ್ಶಿ ಸಿದ್ದೀಕ್ ಹಂಡುಗುಳಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ರಹ್’ಮಾನ್ ಪುಂಜಾಲಕಟ್ಟೆ, ಅರಬಿ ಕುಂಙ್ಞಿ ಮುಡಿಪು, ಮುಹಮ್ಮದ್ ಪುಂಜಾಲಕಟ್ಟೆ, ಇಸ್ಮಾಯಿಲ್ ಉಪ್ಪಳ್ಳಿ, ಜಮಾಲ್ ಮೂಡಬಿದ್ರೆ, ಇಬ್ರಾಹಿಂ ಖಲೀಲ್ ಕೆಸಿ ರೋಡ್, ಹಸನ್ ಪುಂಜಾಲಕಟ್ಟೆ, ಸಲೀಂ ಉಳ್ಳಾಲ, ಝಾಕಿರ್ ಅಹ್ಮದ್ ಚಿಕ್ಕಮಗಳೂರು, ನಸ್ರತುಲ್ಲಾ ಸಾಹಿಬ್ ಉಡುಪಿ, ಇಮ್ರಾನ್ ಕೂಳೂರು, ಅಬ್ಬಾಸ್ ಮಾಗುಂಡಿ, ಅಬ್ಬುಲ್ ರಝಾಕ್ ಮುಂಡ್ಕೂರು, ಖಲೀಲ್ ಉರುಮಣೆ, ಹಸೈನಾರ್ ಕಾಟಿಪಳ್ಳ, ಝುಬೈರ್ ತುರ್ಕಳಿಕೆ, ಝಕರಿಯ್ಯಾ ಮಂಜೇಶ್ವರ, ಹಾಶಿರ್ ಕೆಸಿ ರೋಡ್ ಮತ್ತು ಅಂತಾರಾಷ್ಟ್ರೀಯ ಸಮಿತಿಗೆ ಕೌನ್ಸಿಲರ್ ಗಳಾಗಿ ಹಾಫಿಲ್ ಉಮರುಲ್ ಫಾರೂಕ್ ಸಖಾಫಿ ಎಮ್ಮೆಮಾಡು, ಯೂಸುಫ್ ಸಖಾಫಿ ಅಯ್ಯಂಗೇರಿ ಹಾಗೂ ಮುಹಮ್ಮದ್ ಕಬೀರ್ ಪನೀರ್ ರವರನ್ನು ಆಯ್ಕೆ ಮಾಡಲಾಯ್ತು.

ನಂತರ ನಡೆದ ಪ್ರತಿನಿಧಿ ಸಮಾವೇಶ ನೂತನ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಪಾತೂರು ರವರ ಅಧ್ಯಕ್ಷತೆಯಲ್ಲಿ ಐಸಿಎಫ್ ಖತ್ತರ್ ರಾಷ್ಟ್ರೀಯ ನಾಯಕರಾದ ಜಮಾಲ್ ಸಅದಿ ಅಝಹರಿ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ರಾಜ್ಯ ಸಮಿತಿ ನಾಯಕರಾದ ನೌಫಲ್ ಸಖಾಫಿ ಕಳಸ ತರಗತಿ ನಡೆಸಿದರು. ವೇದಿಕೆಯಲ್ಲಿ ರಾಷ್ಟ್ರೀಯ ನಾಯಕರಾದ ಮುನೀರ್ ಮಾಗುಂಡಿ, ಸಾದಿಖ್ ಮೂಳೂರು, ವಕ್ರ ಸೆಕ್ಟರ್ ಅಧ್ಯಕ್ಷರಾದ ಸಯ್ಯದ್ ಅರ್ಶದ್ ಅಲಿ ಈಶ್ವರಮಂಗಲ, ರಿಸಾಲ ಸ್ಟಡಿ ಸರ್ಕಲ್ ಖತ್ತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ನೌಫಲ್ ಲತೀಫಿ ಮುಂತಾದವರು ಉಪಸ್ಥಿತರಿದ್ದರು.

ಸಿದ್ದೀಖ್ ಹಂಡುಗೂಳಿ ಸ್ವಾಗತಿಸಿ, ಸಂಘಟನಾ ವಿಭಾಗ ಕಾರ್ಯದರ್ಶಿ ರಿಶಾದ್ ಮಧುವನ ವಂದಿಸಿದರು. ಹನೀಫ್ ಪಾತೂರು ಕಾರ್ಯಕ್ರಮ ನಿರೂಪಿಸಿದರು.