janadhvani

Kannada Online News Paper

ಪ್ರವಾದಿ ನಿಂದನೆಯಿಂದ ದೇಶದ ಘನತೆಗೆ ಧಕ್ಕೆ-ಎಸ್ಸೆಸ್ಸೆಫ್

ಸರಕಾರಗಳು ಜವಾಬ್ದಾರಿ ಮರೆತು ವರ್ತಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ

ಆಡಳಿತ ಪಕ್ಷದ ವಕ್ತಾರೆಯೊಬ್ಬರು ಪ್ರವಾದಿಯವರನ್ನು ನಿಂದನೆ ಮಾಡಿರುವ ಪ್ರಕರಣದಿಂದಾಗಿ ಜಾಗತಿಕವಾಗಿ ದೇಶದ ಘನತೆಗೆ ಧಕ್ಕೆ ಉಂಟಾಗಿದೆ.

ಜಾಗತಿಕ ಮಟ್ಟದಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂಬ ಹೆಗ್ಗಳಿಕೆ ಹೊಂದಿರುವ ಭಾರತದ ಘನತೆಯನ್ನು ಉಳಿಸುವ ಜವಾಬ್ದಾರಿ ಸರಕಾರಕ್ಕಿದೆ. ಸರಕಾರಗಳು ಜವಾಬ್ದಾರಿ ಮರೆತು ವರ್ತಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಧರ್ಮಸಮನ್ವಯತೆಗೆ ಧಕ್ಕೆ ಉಂಟು ಮಾಡುವ ಕಿಡಿಗೇಡಿಗಳ ವಿರುದ್ಧ ಸರಕಾರವು ಕಠಿಣ ಕ್ರಮಕೈಗೊಂಡಿದ್ದರೆ ಇಂತಹ ಪ್ರಕರಣಗಳು ಪುನರಾವರ್ತಿಸುತ್ತಿರಲಿಲ್ಲ. ಸರಕಾರದ ಮೌನಸಮ್ಮತಿಯಿಂದಾಗಿಯೇ ಸಂವಿಧಾನದ ಮೂಲ ಆಶಯವಾಗಿರುವ ಜಾತ್ಯತೀತತೆಗೆ ಕೊಡಲಿಯೇಟು ಬಿದ್ದಿದೆ.

ರಾಜಕೀಯ ಪಕ್ಷಗಳ ಉನ್ನತ ಹಂತದ ನಾಯಕರುಗಳ ಕಿಡಿಗೇಡಿಗಳಂತೆ ಹೇಳಿಕೆ ಕೊಡುವ ಮೂಲಕ ಆ ಪಕ್ಷಗಳ ಸ್ವೇಚ್ಛಾಚಾರ ಅನಾವರಣಗೊಂಡಿದೆ.

ದೇಶದ ಘನತೆಯಿರುವುದು ಸರ್ವಧರ್ಮ ಸಮನ್ವಯದಲ್ಲಿ. ಪ್ರವಾದಿ ನಿಂದನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com