janadhvani

Kannada Online News Paper

ಹಜ್ ವಿಷಯದಲ್ಲಿ ದುಬೈ ಶೈಖ್ ರಿಗೆ ಕರೆ? -ಮೋದಿಯನ್ನು ಹೊಗಲುವ ಭರದಲ್ಲಿ ಅಬ್ದುಲ್ಲಾ ಕುಟ್ಟಿ ಎಡವಟ್ಟು

ವಿಶ್ವದ ಎಲ್ಲಾ ದೇಶಗಳಿಗೂ ಹಜ್ ಕೋಟಾವನ್ನು ಹೆಚ್ಚಿಸಲಾಗಿದೆ. ಆದರೆ ಭಾರತಕ್ಕೆ ಹಜ್ ಕೋಟಾ ಹೆಚ್ಚಿಸಲು ಮೋದಿ ಕಾರಣ ಎಂದು ಅಬ್ದುಲ್ಲಾ ಕುಟ್ಟಿ ಹೇಳಿದ್ದರು.

ರಿಯಾದ್: ಹಜ್ ಕೋಟಾ ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ದುಬೈ ಶೈಖ್ ರಿಗೆ ಕರೆ ಮಾಡಿದ್ದರು ಎಂಬ ಭಾರತೀಯ ಹಜ್ ಸಮಿತಿ ಚೆಯರ್ ಮೆನ್ ಎ.ಪಿ.ಅಬ್ದುಲ್ಲಾ ಕುಟ್ಟಿಯವರ ಹೇಳಿಕೆಗೆ ವ್ಯಾಪಕ ಟ್ರೋಲ್.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಉಪ್ಪು ಮತ್ತು ಖಾರ ಸೇವಿಸುವ ನಾಲಗೆಯಿಂದ ತಪ್ಪಾಯಿತು ಕ್ಷಮಿಸಿಬಿಡಿ ಎಂದಿದ್ದಾರೆ. ಜಿದ್ದಾದಲ್ಲಿರುವ ಕಾನ್ಸುಲೇಟ್ ಅಡಿಯಲ್ಲಿ ಹಜ್ ಸಿದ್ಧತೆಯನ್ನು ಪರಿಶೀಲಿಸಲು ಅವರು ಭೇಟಿ ನೀಡಿದ್ದರು.

ಹಜ್ ಕೋಟಾವನ್ನು ಹೆಚ್ಚಿಸುವಂತೆ ದುಬೈ ಶೇಖ್‌ಗೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ ಎಂದು ಕೇಂದ್ರ ಹಜ್ ಸಮಿತಿಯ ಅಧ್ಯಕ್ಷರಾಗಿರುವ ಎ.ಪಿ ಅಬ್ದುಲ್ಲಕುಟ್ಟಿಯವರು ಬಿಜೆಪಿ ಸಮಾವೇಶವೊಂದರಲ್ಲಿ ಮಾಡಿದ ಭಾಷಣವು ಟ್ರೋಲಾಗಿದೆ. ಈ ನಿಟ್ಟಿನಲ್ಲಿ ಅದರ ಬಗ್ಗೆ ಜಿದ್ದಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯೆ ನೀಡಿ ಕ್ಷಮೆಯಾಚಿಸಿದ್ದಾರೆ.

ವಿಶ್ವದ ಎಲ್ಲಾ ದೇಶಗಳಿಗೂ ಹಜ್ ಕೋಟಾವನ್ನು ಹೆಚ್ಚಿಸಲಾಗಿದೆ. ಆದರೆ ಭಾರತಕ್ಕೆ ಹಜ್ ಕೋಟಾ ಹೆಚ್ಚಿಸಲು ಮೋದಿ ಕಾರಣ ಎಂದು ಅಬ್ದುಲ್ಲಾ ಕುಟ್ಟಿ ಹೇಳಿದ್ದರು. ಅಬ್ದುಲ್ಲಕುಟ್ಟಿ ಅವರು ಹಜ್ ಯಾತ್ರೆಯ ಸಿದ್ಧತೆಯನ್ನು ಪರಿಶೀಲಿಸಲು ಜಿದ್ದಾಗೆ ಆಗಮಿಸಿದ್ದು, ಮಕ್ಕಾ ಮತ್ತು ಮದೀನಾಗಳಿಗೆ ಭೇಟಿ ನೀಡಿದರು.