janadhvani

Kannada Online News Paper

ಎಪ್ರಿಲ್ 22ಕ್ಕೆ ಕೆಸಿಎಫ್ ಬಹರೈನ್ ಗ್ರಾಂಡ್‌ ಇಫ್ತಾರ್ ಸಂಗಮ: ಸುಲ್ತಾನುಲ್ ಉಲಮಾ ಮುಖ್ಯ ಅತಿಥಿ

ಮನಾಮ: ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಎಪ್ರಿಲ್ 22 ರಂದು ಗ್ರಾಂಡ್‌ ಇಫ್ತಾರ್ ಕಾರ್ಯಕ್ರಮವನ್ನು ಪಾಕಿಸ್ತಾನ್ ಕ್ಲಬ್ ಮೈದಾನದಲ್ಲಿ ಆಯೋಜಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ ಅಬೂಬಕ್ಕರ್ ಉಸ್ತಾದರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಸಂಜೆ 4:30 ಕ್ಕೆ ಬದರ್ ಮೌಲಿದ್ ಮಜ್ಲಿಸ್ ನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಕರ್ನಾಟಕ ಜಂಇಯ್ಯತುಲ್ ಉಲಮಾ ಸದಸ್ಯರಾದ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆಲೆಸ್ತೀನ್ ರಾಯಭಾರಿ ಸಹಿತ ವಿವಿಧ ಸಂಘಟನಾ ನಾಯಕರು ಭಾಗವಹಿಸಲಿರುವ ಈ ಇಫ್ತಾರ್ ಸಂಗಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ರಾಷ್ಟ್ರೀಯ ಸಮಿತಿ ನೇತಾರರು ಕರೆ ನೀಡಿರುತ್ತಾರೆ.

error: Content is protected !! Not allowed copy content from janadhvani.com