janadhvani

Kannada Online News Paper

ಹಜ್: ಈ ಬಾರಿ ವಿದೇಶದಿಂದ ಎಂಟೂವರೆ ಲಕ್ಷ ಯಾತ್ರಾರ್ಥಿಗಳಿಗೆ ಅವಕಾಶ- ಹಜ್ ಉಮ್ರಾ ಸಚಿವಾಲಯ

ವಿದೇಶದಿಂದ ಎಂಟೂವರೆ ಲಕ್ಷ ಮತ್ತು ದೇಶದೊಳಗಿನ ಸ್ಥಳೀಯರು ಮತ್ತು ವಿದೇಶಿಗರು ಸೇರಿದಂತೆ ಒಂದೂವರೆ ಲಕ್ಷ ಯಾತ್ರಾರ್ಥಿಗಳಿಗೆ ಅವಕಾಶ.

ಮಕ್ಕತುಲ್ ಮುಕರ್ರಮಃ: ಹಜ್ ಸಚಿವಾಲಯವು ಈ ವರ್ಷದ ಹಜ್‌ಗೆ ಅವಕಾಶ ಲಭಿಸುವ ದೇಶೀಯ ಮತ್ತು ವಿದೇಶಿ ಯಾತ್ರಿಕರ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಇದು ವಿದೇಶದಿಂದ ಎಂಟೂವರೆ ಲಕ್ಷ ಮತ್ತು ದೇಶದೊಳಗಿನ ಸ್ಥಳೀಯರು ಮತ್ತು ವಿದೇಶಿಗರು ಸೇರಿದಂತೆ ಒಂದೂವರೆ ಲಕ್ಷ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.ಪ್ರಪಂಚದಾದ್ಯಂತದ ಜನರಿಗೆ ಅವಕಾಶ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ದೇಶಿ ಮತ್ತು ವಿದೇಶಿ ಯಾತ್ರಾರ್ಥಿಗಳ ಅನುಪಾತದ ಆಧಾರದ ಮೇಲೆ ಹಜ್‌ಗೆ ಅವಕಾಶ ನೀಡಲಾಗುವುದು. ಶೇ.85ರಷ್ಟು ಮಂದಿಗೆ ವಿದೇಶದಿಂದ ಮತ್ತು ಶೇ.15ರಷ್ಟು ಮಂದಿಗೆ ದೇಶದೊಳಗಿಂದ ಅವಕಾಶವಿರುತ್ತದೆ. ಈ ಹಿಂದೆ ಒಟ್ಟು ಹತ್ತು ಲಕ್ಷ ಯಾತ್ರಾರ್ಥಿಗಳಿಗೆ ಈ ಬಾರಿ ಹಜ್ ಯಾತ್ರೆಗೆ ಅವಕಾಶ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿತ್ತು. ಇದರ ಅಡಿಯಲ್ಲಿ ವಿದೇಶದ ಎಂಟೂವರೆ ಲಕ್ಷ ಜನರಿಗೆ ಮತ್ತು ದೇಶದೊಳಗಿನ ಒಂದೂವರೆ ಲಕ್ಷ ಮಂದಿಗೆ ಅವಕಾಶ ನೀಡಲಾಗುತ್ತದೆ.

ಪ್ರಪಂಚದಾದ್ಯಂತದ ಜನರಿಗೆ ಅವಕಾಶಗಳನ್ನು ಸೃಷ್ಟಿಸಲು ಅನುಪಾತವನ್ನು ರಚಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಸೌದಿ ಆರೋಗ್ಯ ಸಚಿವಾಲಯವು ಸೂಚಿಸಿದ ಕೋವಿಡ್ ಲಸಿಕೆಯನ್ನು ಪಡೆದ 65 ವರ್ಷದೊಳಗಿನವರಿಗೆ ಹಜ್ ಮುಕ್ತವಾಗಿದೆ.