janadhvani

Kannada Online News Paper

ನಿಕಟ ಸಂಬಂಧಿಗಳ (ಮಹ್ರಮ್) ಉಪಸ್ಥಿತಿಯಿಲ್ಲದೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಉಮ್ರಾ ವೀಸಾ

ಮಹಿಳೆಯರೊಂದಿಗೆ ಪ್ರಯಾಣಿಸಬೇಕೆಂಬ ನಿಯಮವನ್ನೂ ಹಿಂಪಡೆಯಲಾಗಿದೆ.

ರಿಯಾದ್: ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ನಿಕಟ ಸಂಬಂಧಿಗಳ (ಮಹ್ರಮ್) ಉಪಸ್ಥಿತಿಯಿಲ್ಲದೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಉಮ್ರಾ ವೀಸಾಗಳನ್ನು ನೀಡಲಿದೆ.

ಮಹಿಳೆಯರೊಂದಿಗೆ ಪ್ರಯಾಣಿಸಬೇಕೆಂಬ ನಿಯಮವನ್ನೂ ಹಿಂಪಡೆಯಲಾಗಿದೆ. ಮಹ್ರಮ್ ಇಲ್ಲದೆ ಉಮ್ರಾ ನಿರ್ವಹಿಸುವ ಸಾಧ್ಯತೆಯ ಕುರಿತ ವಿಚಾರಣೆಗೆ ಪ್ರತಿಕ್ರಿಯೆಯಾಗಿ ಸಚಿವಾಲಯವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಸ್ಪಷ್ಟನೆ ನೀಡಿದೆ.

ಹೊಸ ನಿರ್ಧಾರವು ಹೊರ ದೇಶಗಳಿಂದ ಉಮ್ರಾಕ್ಕೆ ಬರುವ ಮಹಿಳೆಯರಿಗೆ ಸಮಾಧಾನಕರವಾಗಿದೆ. ಈ ವರೆಗೆ ಹೊರ ದೇಶಗಳ ಮಹಿಳೆಯರು ಒಂಟಿಯಾಗಿ ಉಮ್ರಾಕ್ಕೆ ಬರಲು 45 ವರ್ಷ ತುಂಬಬೇಕಿತ್ತು. ಅದೂ ಅಲ್ಲದೆ,ಇತರ ಮಹಿಳೆಯರೊಂದಿಗೆ ಗ್ರೂಪಿನಲ್ಲಿ ಪ್ರಯಾಣಿಸಬೇಕೆಂಬ ಷರತ್ತು ವಿಧಿಸಲಾಗಿತ್ತು.

ಈ ಷರತ್ತುಗಳನ್ನು ಅನುಸರಿಸಲು ಸಾಧ್ಯವಾಗದವರು ಉಮ್ರಾ ವೀಸಾಗಳನ್ನು ಪಡೆಯಲು ಮಹ್ರಮ್ ಪುರುಷರು ಜತೆಗಿರಬೇಕು ಎಂಬ ನಿಯಮವಿತ್ತು. ಆದರೆ, ಸದ್ಯ ಅಂತಹ ಯಾವುದೇ ಷರತ್ತುಗಳಿಲ್ಲ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com