ಬೆಂಗಳೂರು: ‘ಧರ್ಮ ,ಸಂವಿಧಾನ ,ರಾಜಕೀಯ’ ಎಂಬ ಧ್ಯೇಯ ವಾಕ್ಯದಲ್ಲಿ ಎಸ್ ಎಸ್ ಎಫ್ ರಾಜ್ಯ ಸಮಿತಿ ಹಮ್ಮಿಕೊಂಡ ಡಿವಿಷನ್ ಕಾನ್ಫರೆನ್ಸ್ ಮೆಜೆಸ್ಟಿಕ್‌ನ ತವಕ್ಕಲ್ ಮಸ್ತಾನ್ ದರ್ಗಾ ಸಭಾಂಗಣದಲ್ಲಿ ಮಾ. 26ರಂದು ನಡೆಯಲಿದೆ.
ಪವಿತ್ರ ಇಸ್ಲಾಮಿನ ಆಚಾರ ವಿಚಾರಗಳ ಬಗ್ಗೆ ಅಪಪ್ರಚಾರ ನಡೆಸಿ , ಧರ್ಮಗಳ ಬಗ್ಗೆ ವಿಷಬೀಜ ಬಿತ್ತಿ ,ಸಂವಿಧಾನದ ವಿರೋಧಿ ನಡೆಯ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ,ಇಸ್ಲಾಮ್ ಧರ್ಮದ ವಕ್ತಾರರೆಂದು ಬಿಂಬಿಸಿ ಖುರ್’ಆನ್ ,ಹದೀಸ್ ದುರ್ವ್ಯಾಖ್ಯಾನದ ಮೂಲಕ ಯುವಸಮೂಹಕ್ಕೆ ಅಧರ್ಮದ ಅಮಲು ನೆತ್ತಿಗೇರಿಸಿ ,ಪ್ರಚೋದಿಸಿ ,ಸಮಾಜದ ಸಾಮರಸ್ಯ ಕೆಡಿಸಿ ಅದನ್ನೇ ಧರ್ಮವೆಂದು ಬಿಂಬಿಸುವ ರಾಜಕೀಯ ಪಕ್ಷಗಳಿರುವ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ಧರ್ಮದ ನಿಲುವುಗಳ ವಿಶ್ಲೇಷಣೆಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಸಂಶುದ್ದೀನ್ ಅಝ್ಹರಿ ಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್ ಜೆ ಯು ರಾಜ್ಯ ಕಾರ್ಯದರ್ಶಿ ,ಖ್ಯಾತ ವಾಗ್ಮಿ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ವಿಷಯ ಮಂಡನೆ ನಡೆಸಲಿದ್ದಾರೆ .ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಲತೀಫ್ ಸ’ಅದಿ ಹಾಗೂ ರಾಜ್ಯ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ದಿಕ್ಸೂಚಿ ಭಾಷಣ ನಡೆಸಲಿದ್ದಾರೆ ಸಮಾರಂಭದಲ್ಲಿ ಸಮುದಾಯದ ಗಣ್ಯ ವ್ಯಕ್ತಿಗಳು ,ವಕೀಲರು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.