ಮುಡಿಪು: ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ತಲಕ್ಕಿ ಸಂಸ್ಥೆಯ ವತಿಯಿಂದ ಕರ್ನಾಟಕದಲ್ಲೆ ಮೊತ್ತ ಮೊದಲು ಐತಿಹಾಸಿಕವಾಗಿ ನಿರ್ಮಿಸಲ್ಪಟ್ಟ ತಾಜುಲ್ ಉಲಮಾ ಟವರನ್ನು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರು ಮಾರ್ಚ್ 26 ಶನಿವಾರ ರಾತ್ರಿ 7:00 ಗಂಟೆಗೆ ಉದ್ಘಾಟಿಸಲಿದ್ದಾರೆ.
ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ತಲಕ್ಕಿ ಸಂಸ್ಥೆಯ ಸ್ಥಾಪಕರಾದ ಸಯ್ಯಿದ್ ಶಿಹಾಬುದ್ದೀನ್ ಮಶ್ಹೂರ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಥಮ ಸನದುದಾನ ಸಮ್ಮೇಳನದಲ್ಲಿ ಸಯ್ಯಿದ್ ಇಂಬಿಚ್ಚಿಕೋಯ ತಂಙಳ್,ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್,ಝೈನುಲ್ ಉಲಮಾ ಮಾಣಿ ಉಸ್ತಾದ್,ಡಾ ಹುಸೈನ್ ಸಖಾಫಿ ಚುಳ್ಳಿಕ್ಕೋಡ್,ಹುಸೈನ್ ಸಅದಿ ಕೆ.ಸಿ ರೋಡ್, ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ, ಶಾಫಿ ಸಅದಿ ಬೆಂಗಳೂರು,ಯು.ಟಿ ಖಾದರ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.