janadhvani

Kannada Online News Paper

ಹಿಜಾಬ್: ಹೈಕೋರ್ಟ್ ತೀರ್ಪು ಅಸಾಂವಿಧಾನಿಕ, ಕಾನೂನು ಹೋರಾಟ ಮುಂದುವರಿಕೆ- ಮುಸ್ಲಿಮ್ ಒಕ್ಕೂಟ

ನ್ಯಾಯಾಲಯದ ಸಲಹೆ ಮತ್ತು ಪರಿಗಣನೆ ಪ್ರಶ್ನಾತೀತ ಎಂದು ಭಾವಿಸುವುದು ತಪ್ಪು

ಮಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯ ಪ್ರಕಟಿಸಿದ ಹಿಜಾಬ್ ಬಗ್ಗೆಗಿನ ತೀರ್ಪು ಖೇದಕರ. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ ಅಲ್ಲ, ಹಿಜಾಬ್ ಕಡ್ಡಾಯವಲ್ಲ ಎಂದು ತೀರ್ಪು ನೀಡಿರುವುದು ಅಸಾಂವಿಧಾನಿಕ,ಮೂಲ ಬೂತ ಹಕ್ಕು,ಧಾರ್ಮಿಕ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನಯಾಗಿದೆ.

ಈ ಸಂಭಂದ ನ್ಯಾಯಾಲಯದ ಸಲಹೆ ಮತ್ತು ಪರಿಗಣನೆ ಪ್ರಶ್ನಾತೀತ ಎಂದು ಭಾವಿಸುವುದು ತಪ್ಪು. ಹಿಜಾಬ್ ಮುಸ್ಲಿಮ್ ಮಹಿಳೆಯರ ಘನತೆ ಮತ್ತು ಸಂರಕ್ಷಣೆಯನ್ನು ಪ್ರತಿಪಾದಿಸುತ್ತದೆ. ಶೈಕ್ಷಣಿಕ ಸಂಸ್ಥೆಯಲ್ಲಿ ಸಮವಸ್ತ್ರದಲ್ಲಿ ಅದೇ ಬಣ್ಣದ ಶಿರ ಧಿರಿಸು ಧರಿಸುವಿಕೆಗೆ ನಿರ್ಭಂದ ಹೇರಿಕೆಯ ವಿರುದ್ಧ ಮುಸ್ಲಿಮ್ ಮುಖಂಡರು, ಉಲೇಮಾ ಸಂಘಟನೆಗಳು, ಮಹಿಳಾ ವರ್ಗ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸಲಿದೆ ಎಂದು ಮುಸ್ಲಿಮ್ ಒಕ್ಕೂಟ ದ. ಕ. ಜಿಲ್ಲಾಧ್ಯಕ್ಷರಾದ ಕೆ.ಅಶ್ರಫ್ ತಿಳಿಸಿದ್ದಾರೆ.