janadhvani

Kannada Online News Paper

ಹಿಜಾಬ್: ಹೈಕೋರ್ಟ್ ತೀರ್ಪು ಅತ್ಯಂತ ಖೇದಕರ ಮತ್ತು ದುರದೃಷ್ಟಕರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಸುಪ್ರೀಂ ಕೋರ್ಟ್‌ನಿಂದ ನ್ಯಾಯಯುತ ತೀರ್ಪು ಲಭಿಸಲಿದೆ ಎಂಬ ನಿರೀಕ್ಷೆಯಿದೆ ಎಂದು ಕಾಂತಪುರಂ ಹೇಳಿದರು.

ಕೋಝಿಕ್ಕೋಡ್: ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ತೀರ್ಪು ಅತ್ಯಂತ ಖೇದಕರ ಮತ್ತು ದುರದೃಷ್ಟಕರ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಕಾರಂದೂರು ಮರ್ಕಝ್ ನಲ್ಲಿ ನಡೆದ ಇಮಾಮ್ ಕಾನ್ಸರೆನ್ಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನ್ಯಾಯಾಲಯದ ಬಗ್ಗೆ ಎಲ್ಲಾ ಗೌರವವನ್ನು ಉಳಿಸಿಕೊಂಡು ಹೇಳುತ್ತಿದ್ದೇನೆ, ಈ ತೀರ್ಪು ಇಸ್ಲಾಮಿನ ಧಾರ್ಮಿಕ ಸಿದ್ಧಾಂತಗಳಿಗೆ ಮತ್ತು ಭಾರತೀಯ ಪ್ರಜೆಯಾದ ಓರ್ವ ವಿಶ್ವಾಸಿಯ ಮೂಲಭೂತ ಹಕ್ಕುಗಳಿಗೆ ಹಾನಿ ಮಾಡುತ್ತದೆ. ಸುಪ್ರೀಂ ಕೋರ್ಟ್‌ನಿಂದ ನ್ಯಾಯಯುತ ತೀರ್ಪು ಲಭಿಸಲಿದೆ ಎಂಬ ಶುಭ ನಿರೀಕ್ಷೆಯಿದೆ ಎಂದು ಕಾಂತಪುರಂ ಹೇಳಿದರು.
ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯವಲ್ಲ ಎಂಬ ನ್ಯಾಯಾಲಯದ ತೀರ್ಪು ಇಸ್ಲಾಮಿನ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಹಿಜಾಬ್ ಕಡ್ಡಾಯ ಎಂಬುವುದರಲ್ಲಿ ಮುಸ್ಲಿಮ್ ಜಗತ್ತಿನಲ್ಲಿ ಎಂದಿಗೂ ಯಾವುದೇ ವಿರೋಧ ಮತ್ತು ವಿವಾದ ನಡೆದಿಲ್ಲ ಎಂದೂ ಅವರು ಹೇಳಿದರು.