ಕುಂಬಳೆ, ಮಾ.13: ಐದು ದಿನಗಳಿಂದ ನಡೆಯುತ್ತಿರುವ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಹದಿನಾರನೇ ಉರೂಸ್ ಮುಬಾರಕ್ ಸಮಾರೋಪ ಸಮಾರಂಭ ಮತ್ತು ಸನದು ದಾನ ಇಂದು ಸಂಜೆ 4:00 ಗಂಟೆಗೆ ನಡೆಯಲಿದೆ.
ಮಹ್ಳರತುಲ್ ಬದ್ರಿಯ್ಯಾ ಆಧ್ಯಾತ್ಮಿಕ ಮಜ್ಲಿಸಿನೊಂದಿಗೆ ಸನದು ದಾನ ಸಮ್ಮೇಳನ ಆರಂಭ ಆಗಲಿದೆ. ಸಯ್ಯಿದ್ ಅಲಿ ಬಾಫಕಿ ತಂಙಳ್ ಪ್ರಾರ್ಥನೆ ನಡೆಸುವರು. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧ್ಯಕ್ಷರಾಗಿರುವ ಇ. ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸುವರು.ಸನದು ದಾನ ನಿರ್ವಹಿಸಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಪ್ರಭಾಷಣ ಮಾಡುವರು.
ಸಯ್ಯಿದ್ ಖಲೀಲುಲ್ ಬುಖಾರಿ ತಂಙಳ್ ಮತ್ತು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ನಡೆಸುವರು. ಸಯ್ಯಿದ್ ಮುಹಮ್ಮದ್ ಇಬ್ರಾಹೀಂ ಪೂಕುಞಿ ತಂಙಳ್, ಸಯ್ಯಿದ್ ತ್ವಾಹ ತಂಙಳ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮುತ್ತೂರ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಎ.ಪಿ ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್ತ್, ಪಿ ಹೈದ್ರೋಸ್ ಮುಸ್ಲಿಯಾರ್ ಕೊಲ್ಲಂ, ವಿ.ಪಿ.ಎಂ. ಫೈಝಿ ವಿಲ್ಯಾಪಲ್ಲಿ, ಕೆ.ಕೆ ಅಹ್ಮದ್ ಮುಸ್ಲಿಯಾರ್, ಮೌಲಾನಾ ಶಾಫಿ ಸಅದಿ ಬೆಂಗಳೂರು , ಕೆ.ಪಿ ಅಬೂಬಕರ್ ಮುಸ್ಲಿಯಾರ್, ಹಝ್ರತ್ ಮುಖ್ತಾರ್ ಬಾಖವಿ, ಹುಸೈನ್ ಸಅದಿ ಕೆ.ಸಿ ರೋಡ್, ಡಾ.ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್, ಲತೀಫ್ ಸಅದಿ ಶಿವಮೊಗ್ಗ, ನಿಝಾಮುದ್ದೀನ್ ಪಾಳಿಲಿ ಕೊಲ್ಲಂ, ಸಿ.ಎನ್ ಜಅಫರ್ ಮುಂತಾದವರು ಭಾಷಣ ಮಾಡುವರು. ಯೇನಪೋಯ ಅಬ್ದುಲ್ಲಾ ಕುಞ್ಞಿ ಹಾಜಿ ಉಡುಗೊರೆ ನೀಡುವರು.
ಈ ವರ್ಷ 116 ಹಿಮಮಿ ಪಂಡಿತರು ಮತ್ತು 27 ಹಾಫಿಝ್ ಗಳು ಸನದು ಸ್ವೀಕರಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಮೌಲಿದ್ ಮಜ್ಲಿಸಿಗೆ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಕೂರ ನೇತೃತ್ವ ವಹಿಸುವರು . ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ ಪ್ರಭಾಷಣ ಮಾಡುವರು. ಮಧ್ಯಾಹ್ನ 1.30 ಗಂಟೆಗೆ ಖತಂ ದುಆ ಕಾರ್ಯಕ್ರಮಕ್ಕೆ ಸಯ್ಯಿದ್ ಶಹೀರ್ ತಂಙಳ್ ಅಲ್ ಬುಖಾರಿ, ಸ್ವಾಲಿಹ್ ಸಅದಿ ತಳಿಪ್ಪರಂಬ್ ನೇತೃತ್ವ ವಹಿಸುವರು.