janadhvani

Kannada Online News Paper

ಸೌದಿ-ಬಹ್ರೇನ್ ಕಾಸ್‌ವೇಯಲ್ಲಿ ಪ್ರಯಾಣಿಸಲು ಬೂಸ್ಟರ್ ಡೋಸ್ ಕಡ್ಡಾಯ

ಮೂರು ತಿಂಗಳೊಳಗೆ ಎರಡನೇ ಡೋಸ್ ಪಡೆದವರಿಗೆ ಮತ್ತು ಕೋವಿಡ್ ಲಸಿಕೆ ಸ್ವೀಕರಿಸುವುದರಲ್ಲಿ ವಿಶೇಷ ವಿನಾಯ್ತಿ ಲಭಿಸಿದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ರಿಯಾದ್: ಸೌದಿ-ಬಹ್ರೇನ್ ಕಾಸ್‌ವೇಯಲ್ಲಿ ಪ್ರಯಾಣಿಸಲು ಬೂಸ್ಟರ್ ಡೋಸ್ ಕಡ್ಡಾಯವಾಗಿದೆ ಎಂದು ಕಾಸ್‌ವೇ ಅಥಾರಿಟಿ ಹೇಳಿದೆ. ಕಾಸ್‌ವೇಯಲ್ಲಿ ಪ್ರಯಾಣಿಸುವವರು ಮತ್ತು ದೇಶವನ್ನು ಪ್ರವೇಶಿಸುವವರು ಮೂರನೇ ಡೋಸ್ ಪಡೆದಿರಬೇಕು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಮೂರು ತಿಂಗಳೊಳಗೆ ಎರಡನೇ ಡೋಸ್ ಪಡೆದವರಿಗೆ ಮತ್ತು ಕೋವಿಡ್ ಲಸಿಕೆ ಸ್ವೀಕರಿಸುವುದರಲ್ಲಿ ವಿಶೇಷ ವಿನಾಯ್ತಿ ಲಭಿಸಿದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಕೋವಿಡ್ ಕವರೇಜ್‌ನೊಂದಿಗೆ ಅನುಮೋದಿತ ವೈದ್ಯಕೀಯ ವಿಮೆಯನ್ನು ಹೊಂದಿರುವ ಹನ್ನೆರಡು ವರ್ಷದೊಳಗಿನ ಮಕ್ಕಳು ಸಹ ವಿನಾಯಿತಿಗೆ ಅರ್ಹರಾಗಿರುತ್ತಾರೆ.

ಸೌದಿ ಅರೇಬಿಯಾಕ್ಕೆ ಪ್ರವೇಶಿಸಲು ಆಂತರಿಕ ಸಚಿವಾಲಯವು ಹೊಸ ರಿಯಾಯಿತಿಗಳನ್ನು ನೀಡುತ್ತಿದ್ದಂತೆ ಕಾಸ್ವೇ ಪ್ರಾಧಿಕಾರದ ವಿವರಣೆಯು ಬಂದಿದೆ. ಪ್ರಸ್ತುತ, ದೇಶಕ್ಕೆ ಪ್ರವೇಶಿಸಲು ಲಸಿಕೆ ಕಡ್ಡಾಯವಲ್ಲ. ಅಂತಹವರಿಗೆ ಈ ಹಿಂದೆ ಜಾರಿಯಲ್ಲಿದ್ದ ಕ್ವಾರಂಟೈನ್ ವ್ಯವಸ್ಥೆಯನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಪಿಸಿಆರ್ ಪರೀಕ್ಷೆಯ ಫಲಿತಾಂಶದ ಅಗತ್ಯವಿಲ್ಲ.