janadhvani

Kannada Online News Paper

ಪಂಚರಾಜ್ಯಗಳ ಚುನಾವಣೆ: ಕಾಂಗ್ರೆಸ್​​ಗೆ ಭಾರೀ ​​ಹಿನ್ನಡೆ-ಇವಿಎಂ ದುರ್ಬಳಕೆ ವಿರುದ್ಧ ಪ್ರತಿಭಟನೆ

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತ ಎಣಿಕೆ ಟ್ರೆಂಡಿಂಗ್​​ನಲ್ಲಿ ಎಲ್ಲಾ ಐದು ರಾಜ್ಯಗಳಲ್ಲಿ ಕಾಂಗ್ರೆಸ್​​​ ಹಿಂದುಳಿದಿದೆ.

ನವದೆಹಲಿ,ಮಾ.10: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್​​ ಅಧಿಕಾರದಿಂದ ದೂರ ಉಳಿಯೋದು ಖಚಿತವಾಗಿದೆ. ಇತ್ತ ಕಾಂಗ್ರೆಸ್​ ಕಾರ್ಯಕರ್ತರು ನವದೆಹಲಿಯಲ್ಲಿ ಪ್ರತಿಭಟನೆಗೆ ಇಳಿದಿದ್ದು, ಇವಿಎಂ ದುರ್ಬಳಕೆಯಾಗಿದೆ ಎಂದು ಆರೋಪ ಮಾಡಿದ್ದಾರೆ.

ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಂದುವರಿದ್ದು, ಈ ನಡುವೆಯೇ ದೆಹಲಿಯಲ್ಲಿರೋ ಪಕ್ಷದ ಕಚೇರಿಯ ಎದುರು ಇವಿಎಂ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತ ಎಣಿಕೆ ಟ್ರೆಂಡಿಂಗ್​​ನಲ್ಲಿ ಎಲ್ಲಾ ಐದು ರಾಜ್ಯಗಳಲ್ಲಿ ಕಾಂಗ್ರೆಸ್​​​ ಹಿಂದುಳಿದಿದೆ. ಉತ್ತರಾಖಂಡ್​​, ಮಣಿಪುರ, ಗೋವಾ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಪಡೆದಿದ್ದು, ಪಂಜಾಬ್​​ನಲ್ಲಿ ಎಎಪಿ ಪಕ್ಷ ಸ್ಪಷ್ಟ ಬಹುಮತ ಪಡೆಯುವತ್ತ ಹೆಜ್ಜೆ ಇಟ್ಟಿದೆ.