janadhvani

Kannada Online News Paper

“ಅಸ್ಸಲಾಂ ಯಾ ಸಯ್ಯಿದೀ” ಹೈದರಲಿ ತಂಙಳರಿಗೆ ಕಣ್ಣೀರಿನೊಂದಿಗೆ ಅಂತಿಮ ವಿದಾಯ

ಮಲಪ್ಪುರಂ: ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಗಣ್ಯರು, ಸ್ನೇಹಿತರು, ಸಂಬಂಧಿಕರು, ಸಾವಿರಾರು ಅಭಿಮಾನಿಗಳ ಅಶ್ರುತರ್ಪಣದ ನಡುವೆ ಸರ್ಕಾರಿ ಗೌರವದೊಂದಿಗೆ ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷರು ,ಲಕ್ಷಾಂತರ ಜನರ ಆಶ್ರಯವಾಗಿದ್ದ ಹೈದರಲಿ ಶಿಹಾಬ್ ತಂಙಳ್ ಅವರ ಜನಾಝವನ್ನು ಮಧ್ಯರಾತ್ರಿ 2.30 ಗಂಟೆಯ ಸಮಯ ಪಾಣಕ್ಕಾಡ್ ಜುಮ್ಮಾ ಮಸೀದಿಯ ಖಬರ್ಸ್ಥಾನದಲ್ಲಿ ದಫನ ಮಾಡಲಾಯ್ತು.

ನಾಳೆ ಬೆಳಿಗ್ಗೆ 9ಗಂಟೆಗೆ ನಿಗಧಿಯಾಗಿದ್ದ ಅಂತಿಮ ವಿಧಿ ವಿಧಾನ ಕಾರ್ಯಗಳು ಪಾಣಕ್ಕಾಡ್ ಕುಟುಂಬದ ತೀರ್ಮಾನದಂತೆ ಮಧ್ಯರಾತ್ರಿಯೇ ನೆರವೇರಿಸಲು ನಿರ್ಧರಿಸಲಾಗಿತ್ತು.

ಶಿಹಾಬ್ ತಂಙಳರ ಜನಾಝ ಅಂತಿಮ ದರ್ಶನಕ್ಕಾಗಿ ಜನಸ್ತೋಮವೇ ನೆರೆದಿದ್ದು, ಮಲಪ್ಪುರಂ ಟೌನ್ ಹಾಲ್ ನಲ್ಲಿ ಅಂತಿಮ ದರ್ಶನಕ್ಕೆ ಸ್ವಯಂ ಸೇವಕರಿಂದ ನಿಯಂತ್ರಿಸಲು ಸಾಧ್ಯಯವಾಗದ ಮಟ್ಟಿನಲ್ಲಿ ಭಾರೀ ನೂಕುನುಗ್ಗಲು ನಡೆದಿತ್ತು.

ಕೆಲಕಾಲ ಅಸೌಖ್ಯದಿಂದ ಆಸ್ಪತ್ರೆಯಲ್ಲಿದ್ದ ಕಾರಣ ಜನರ ದರ್ಶನಕ್ಕಾಗಿ ಜನಾಝವನ್ನು ಹೆಚ್ಚಿನ ಸಮಯ ಇಡುವುದು ಸಮಂಜಸವಲ್ಲವೆಂದು ಪಾಣಕ್ಕಾಡ್ ಕುಟುಂಬವು ರಾತ್ರಿ ನಿರ್ಧರಿಸಿದಂತೆ ಮಧ್ಯರಾತ್ರಿಯಲ್ಲೇ ದಫನ ಮಾಡಲಾಯ್ತು. ಲಕ್ಷಾಂತರ ಜನರು ಶಿಹಾಬ್ ತಂಙಳರ ಅಂತಿಮ ದರ್ಶನಕ್ಕಾಗಿ ಆಗವಿಸಿದ್ದು, ಹಲವಾರು ರಾಜಕೀಯ , ಸಾಮಾಜಿಕ, ಧಾರ್ಮಿಕ ನಾಯಕರು ಭಾಗಿಯಾದರು.