janadhvani

Kannada Online News Paper

ಸೌದಿ: ಹೊರ ದೇಶಗಳಿಂದ ಪಡೆದ ಲಸಿಕೆ ಪ್ರಮಾಣಪತ್ರಗಳಿಗೆ ಅನುಮೋದನೆ ಪಡೆಯುವ ವಿಧಾನ

ರಿಯಾದ್: ದೇಶದ ಹೊರಗಿನಿಂದ ಪಡೆದ ಕೊರೋನಾ ಲಸಿಕೆ ಪ್ರಮಾಣಪತ್ರಗಳಿಗೆ ಸೌದಿ ಅರೇಬಿಯಾದ ಅನುಮೋದನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಸೌದಿ ಅರೇಬಿಯಾದಲ್ಲಿ ಒಂಬತ್ತು ವಿಧದ ಲಸಿಕೆಗಳನ್ನು ಅನುಮೋದಿಸಲಾಗಿದೆ: ಫಿಜರ್, ಸಿನೊಫಾಮ್, ಸಿನೊವಾಕ್, ಕೊವಾಕ್ಸಿನ್, ಸ್ಪುಟ್ನಿಕ್, ಕೊವೊವಾಕ್, ಮೊಡೆನಾ, ಅಸ್ಟ್ರಾಜೆನೆಕಾ ಮತ್ತು ಜಾನ್ಸೆನ್. ಈ ಲಸಿಕೆಗಳನ್ನು ಸ್ವೀಕರಿಸಿರುವವರು ಲಸಿಕೆ ಪ್ರಮಾಣಪತ್ರವನ್ನು ಅನುಮೋದಿಸಲು ಫಾರ್ಮ್ ಅನ್ನು ಭರ್ತಿ ಮಾಡಿ ಅದನ್ನು ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಬೇಕು.

ಅರ್ಜಿಯ ಪ್ರಕ್ರಿಯೆ ಪೂರ್ಣಗೊಳ್ಳಲು ಐದು ಕೆಲಸದ ದಿನಗಳು ತೆಗೆದುಕೊಳ್ಳಲಿದೆ ಎಂದು ಸಚಿವಾಲಯ ಹೇಳಿದೆ. ಈ ಮಧ್ಯೆ, ಒಂದು ಅರ್ಜಿ ಸಲ್ಲಿಸಿರುವವರು ಹೊಸ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ.

ಅರ್ಜಿಗಳನ್ನು ಸ್ವೀಕರಿಸಲು ಈ ಕೆಳಗಿನವುಗಳು ಅಗತ್ಯವಿದೆ

ಅರ್ಜಿದಾರರ ರಾಷ್ಟ್ರೀಯ ID, ನಿವಾಸ ಅಥವಾ ಗಡಿ ಸಂಖ್ಯೆ, ಪಾಸ್‌ಪೋರ್ಟ್‌ನ ಪ್ರತಿ ಮತ್ತು ವ್ಯಾಕ್ಸಿನೇಷನ್ ಪ್ರಮಾಣಪತ್ರದ ಪ್ರತಿ. ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬೇಕು. ಹೆಚ್ಚುವರಿಯಾಗಿ, ಲಸಿಕೆ ಪ್ರಮಾಣಪತ್ರದಲ್ಲಿ ವೈಯಕ್ತಿಕ ಮಾಹಿತಿಯನ್ನು ನಿಖರವಾಗಿ ದಾಖಲಿಸಿರಬೇಕು.

ಮಾಹಿತಿಯು ಅರೇಬಿಕ್, ಇಂಗ್ಲಿಷ್ ಅಥವಾ ಫ್ರೆಂಚ್ ಭಾಷೆಯಲ್ಲಿರಬೇಕು. ಇಲ್ಲದಿದ್ದರೆ ಅರೇಬಿಕ್‌ಗೆ ಅನುವಾದಿಸಲಾದ ದೃಢೀಕೃತ ಪ್ರತಿ ಇರಬೇಕು. ಪ್ರಮಾಣಪತ್ರವು ಲಸಿಕೆಯ ಹೆಸರು, ಡೋಸ್ ಸ್ವೀಕರಿಸಿದ ದಿನಾಂಕ ಮತ್ತು ಬ್ಯಾಚ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.