janadhvani

Kannada Online News Paper

ದುಬೈ ಪ್ರಯಾಣಕ್ಕೆ ರಾಪಿಡ್ ಪಿಸಿಆರ್ ಟೆಸ್ಟ್ ಅಗತ್ಯವಿಲ್ಲ- ಇಂದಿನಿಂದ ನಿಯಮ ಜಾರಿ

ದುಬೈ: ದುಬೈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ರ್‍ಯಾಪಿಡ್ ಪಿಸಿಆರ್ ಟೆಸ್ಟ್ ಅಗತ್ಯವನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಮನ್ನಾ ಮಾಡಿದ್ದಾರೆ. ಭಾರತ ಸೇರಿದಂತೆ, ನೆರೆಯ ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಪ್ರಯಾಣಿಕರು ಇನ್ನು ಮುಂದೆ ದುಬೈ ವಿಮಾನ ನಿಲ್ದಾಣದಲ್ಲಿ ಇಳಿಯಲು ರ್‍ಯಾಪಿಡ್ ಪಿಸಿಆರ್ ಟೆಸ್ಟ್ ಪರೀಕ್ಷೆಯ ಅಗತ್ಯವಿಲ್ಲ. ಹೊಸ ಬದಲಾವಣೆ ಇಂದು ಬೆಳಗ್ಗೆ 8 ಗಂಟೆಯಿಂದ ಜಾರಿಗೆ ಬಂದಿದೆ. 

ಆದಾಗ್ಯೂ, 48 ಗಂಟೆಗಳ ಒಳಗಿನ RTPCR ನೆಗಟಿವ್ ಫಲಿತಾಂಶದ ಅವಶ್ಯಕತೆಯನ್ನು ರದ್ದುಮಾಡಲಾಗಿಲ್ಲ. ಅದೇರೀತಿ ದುಬೈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ದುಬೈ ವಿಮಾನ ನಿಲ್ದಾಣದಲ್ಲಿ ನಡೆಸಲಾಗುತ್ತಿರುವ  ಕೋವಿಡ್ ಪರೀಕ್ಷೆ ಮುಂದುವರಿಯಲಿದೆ. ಫಲಿತಾಂಶವು ನೆಗೆಟಿವ್ ಆಗುವವರೆಗೆ ಪ್ರಯಾಣಿಕರು ಕ್ವಾರಂಟೈನ್ ಕಾರ್ಯವಿಧಾನಗಳನ್ನು ಅನುಸರಿಸಬೇಕು. UAE ಯ ಇತರ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರಿಗೆ ಹೊಸ ರಿಯಾಯಿತಿ ಪ್ರಸ್ತುತ ಅನ್ವಯಿಸುವುದಿಲ್ಲ.

ಶಾರ್ಜಾ ಪ್ರಯಾಣಿಕರಿಗೆ ರಾಪಿಡ್ ಟೆಸ್ಟ್ ಅಗತ್ಯವಿಲ್ಲ- ಏರ್ ಅರೇಬಿಯಾ