janadhvani

Kannada Online News Paper

ಹಿಜಾಬ್‌: ಸುರಯ್ಯ ಅಂಜುಮ್ ಗೆ ಸಾಮುದಾಯಿಕ ಉಸಾಬರಿ ಬೇಡ- ಮುಸ್ಲಿಮ್ ಒಕ್ಕೂಟ

ದೇಶ ಪ್ರೇಮ ಪಾಠವನ್ನು ಒಂದು ರಾಜಕೀಯ ಪಕ್ಷದ ವಕ್ತಾರೆ ಸುರಯ್ಯಾ ಅಂಜುಮ್ ನಿಂದ ಕಲಿತು ಕೊಳ್ಳುವ ಅನಿವಾರ್ಯತೆ ಈವರೆಗೆ ಸೃಷ್ಟಿಯಾಗಿಲ್ಲ

ಮಂಗಳೂರು :ಹಿಜಾಬ್ ಮುಸ್ಲಿಮ್ ಸ್ತ್ರೀಯರ ಸಾಂವಿಧಾನಿಕ ಮತ್ತು ಧಾರ್ಮಿಕ ಹಕ್ಕು,ಧಾರ್ಮಿಕ ಸರ್ವ ಹಕ್ಕುಗಳನ್ನು ರಕ್ಷಿಸಲು ನಾವು ಬದ್ದರಿದ್ದೇವೆ. ಈ ಹಕ್ಕುಗಳನ್ನು ,ಅದರ ಜೊತೆಗೆ ಸಾರ್ವತ್ರಿಕ ಶಿಕ್ಷಣ ಮತ್ತು ದೇಶಪ್ರೇಮವನ್ನು ನಾವು ಚೆನ್ನಾಗಿಯೇ ಬಲ್ಲೆವು.

ಧಾರ್ಮಿಕ ಸಂಪ್ರದಾಯದ ರಕ್ಷಣೆ, ಶಿಕ್ಷಣ ಮತ್ತು .ದೇಶ ಪ್ರೇಮ ನಮ್ಮ ರಕ್ತದಲ್ಲಿ ದೆ. ಇದರ ಪಾಠವನ್ನು ನಮಗೆ ಒಂದು ರಾಜಕೀಯ ಪಕ್ಷದ ವಕ್ತಾರೆ ಸುರಯ್ಯಾ ಅಂಜುಮ್ ನಿಂದ ಕಲಿತು ಕೊಳ್ಳುವ ಅನಿವಾರ್ಯತೆ ಈವರೆಗೆ ಸೃಷ್ಟಿಯಾಗಿಲ್ಲ . ಸುರಾಯ್ಯ ಅಂಜುಮ್ ತಾನು ಪ್ರತಿನಿಧಿಸುವ ಪಕ್ಷದಿಂದ ಹಿಜಾಬ್ ಅನ್ನು ವಿರೋಧಿಸುವ ರಾಷ್ಟ್ರೀಯ ಪಕ್ಷಕ್ಕೆ ಪಕ್ಷಾಂತರ ಗೊಂಡರೆ ಇನ್ನೂ ಹೆಚ್ಚಿನ ಪ್ರಚಾರ ಗಿಟ್ಟಿಸ ಬಹುದು.

ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಒಂದು ನಿರ್ಧಿಷ್ಟ ಧರ್ಮದ ಮಹಿಳೆಯರ ಸಾಂವಿಧಾನಿಕ ಹಕ್ಕನ್ನು ಹೀಯಾಳಿಸಿದರೆ ಮತ್ತು ತೆಗಳಿದರೆ ಸಾಮೂಹಿಕ ಬಹಿಷ್ಕಾರಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚು ಎಂದು ಸುರಯ್ಯ ಅಂಜುಮ್ ಅರ್ಥ ಮಾಡಿ ಇತರರಿಗೆ ಭೋಧನೆ ಮಾಡುವುದು ಒಳಿತು.

ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.