ಮಂಗಳೂರು,ಫೆ.3: ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ತಂಙಳ್‍ರವರ 429ನೇ ವಾರ್ಷಿಕ ಮತ್ತು 21ನೇ ಪಂಚವಾರ್ಷಿಕ ಉರೂಸ್ ನೇರ್ಚೆ ಕಾರ್ಯಕ್ರಮವು ಫೆ.10ರಿಂದ ಆರಂಭಗೊಂಡು ಮಾರ್ಚ್ 6ರವರೆಗೆ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಕಾರಣದಿಂದಾಗಿ ಉರೂಸ್ ಮುಂದೂಡಲ್ಪಟ್ಟಿತ್ತು. ಇದೀಗ 2022ರ ಫೆ. 10ರಂದು ಸಂಜೆ ನಾಲ್ಕು ಗಂಟೆಗೆ ತಾಜುಲ್ ಉಲಮಾರ ಸುಪುತ್ರ ಕುರ್ರತುಸ್ಸಾದಾತ್ ಸಯ್ಯಿದ್ ಅವರು ನೇತೃತ್ವದಲ್ಲಿ ದರ್ಗಾ ಝಿಯಾರತ್ ಹಾಗೂ ಮಾಸಿಕ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮದೊಂದಿಗೆ ಉಳ್ಳಾಲ ಉರೂಸ್ ಕಾರ್ಯಕ್ರಮವು ಆರಂಭವಾಗಲಿದೆ ಎಂದು ತಿಳಿಸಿದರು.
ಫೆ. 10ರಂದು ಸಂಜೆ ಏಳು ಗಂಟೆಗೆ ಉರೂಸ್ ಕಾರ್ಯಕ್ರಮವನ್ನು ಸಯ್ಯಿದುಲ್ ಉಲಮಾ ಜಿಪ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿರುವರು. ಸಮಾರೋಪ ಕಾರ್ಯಕ್ರಮವನ್ನು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೆರವೇರಿಸಲಿರುವರು ಎಂದರು.
ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಙಳ್ ರವರ ನೇತೃತ್ವದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಮಾಣಿ ಉಸ್ತಾದ್, ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸ್ವಾದಿಕ್ ಅಲಿ ಶಿಹಾಬ್ ತಂಙಳ್, ಇಬ್ರಾಹಿಂ ಕಲೀಲ್ ತಂಙಳ್, ಅಲಿ ಕುಟ್ಟಿ ಮುಸ್ಲಿಯಾರ್, ಅಲಿ ಬಾಫಕಿ ತಂಙಳ್, ಅಹ್ಮದ್ ಅಲಿ ಶಿಹಾಬ್ ತಂಙಳ್, ಎಂ.ಟಿ ಉಸ್ತಾದ್, ಅಟಕ್ಕೋಯ ತಂಙಳ್ ಕುಂಬೋಲ್, ಅಲಿ ತಂಙಳ್ ಕುಂಬೋಲ್, ನಾಸಿರ್ ಹೈ, ತಂಙಳ್ ಕೋಯಿಕೋಡ್, ಜಮಲುಲ್ಲೈಲಿ ತಂಙಳ್, ಝೈನುಲ್ ಹಬೀಬಿ ತಂಙಳ್ ದುಗಲಡ್ಕ, ಉಳ್ಳಾಲ ಶಾಸಕರಾದ ಯು.ಟಿ. ಖಾದರ್, ಸಂಸದ ನಳೀನ್ ಕುಮಾರ್ ಕಟೀಲ್, ಸಚಿವರಾದ ಅಂಗಾರ, ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಸೌಹಾರ್ದ ಸಮ್ಮೆಳನದಲ್ಲಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಸಚಿವರುಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಅನೇಕ ಉಮರಾ ನಾಯಕರುಗಳು, ವಿದ್ವಾಂಸರುಗಳು ಆತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆ.10 ರಿಂದ ಮಾ.4ರವರೆಗೆ ರಾತ್ರಿ ಧಾರ್ಮಿಕ ಮುಖಂಡರುಗಳಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಡಾ.ಅಬ್ದುಲ್ ಹಕೀಂ ಅಝ್ಹರಿ, ಕಬೀರ್ ಬಾಖವಿ, ಫಾರೂಕ್ ನಈಮಿ ಕೊಲ್ಲಮ್, ಸಿರಾಜುದ್ದೀನ್ ಖಾಸಿಮಿ, ನೌಶಾದ್ ಬಾಖವಿ, ಅಬ್ದುಲ್ ರಶೀದ್ ಝೈನಿ ಕಾಮಿಲ್, ಜಲಾಲ್ ಮದನಿ ಆಲಪುಝ, ಖಲೀಲ್ ಹುದವಿ, ಅಬ್ದುಲ್ ದಾರಿಮಿ ಕುಕ್ಕಿಲ, ಹನೀಫ್ ನಿಝಾಮಿ, ಸಮೀರ್ ದಾರಿಮಿ, ಬಶೀರ್ ಮದನಿ ನೀಲಗಿರಿ, ಸಿಂಸಾರುಲ್ ಹಕ್ ಹುದವಿ, ಯಾಸೀನ್ ಮದನಿ ಜೌಹರಿ, ರಹ್ಮತುಲ್ಲ ಖಾಸಿಮಿ ಮುತ್ತೇಡಮ್, ಮುತ್ತಲಿಬ್ ಮದನಿ ಕುಟ್ಯಾಡಿ, ಸಿರಾಜುದ್ದೀನ್ ಅಝ್ಹರಿ ಕಮ್ಮಣಮ್, ಬಶೀರ್ ಪೈಝಿ ದೇಶಮಂಗಲಮ್, ಅಬ್ದುಲ್ ಸಮದ್ ಸಮದಾನಿ, ಇ.ಪಿ ಅಬೂಬಕ್ಕರ್ ಮುಸ್ಲಿಯಾರ್, ಅಝೀಝ್ ದಾರಿಮಿ ಚೊಕ್ಕಬೆಟ್ಟು ಸೇರಿದಂತೆ ಅನೇಕ ಉಲಮಾ ಪ್ರಮುಖರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಉರೂಸ್ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ಸನದುದಾನ ಮಹಾಸಮ್ಮೇಳನ, ಮದನಿ ಸಂಗಮ, ಮದನಿ ಮೌಲೂದ್ ಪಾರಾಯಣ, ಬೃಹತ್ ಮೆಡಿಕಲ್ ಕ್ಯಾಂಪ್, ಸರ್ವ ಧರ್ಮ ಮುಖಂಡರ ಸಮ್ಮೇಳನ, ಸಂದಲ್ ಮೆರವಣಿಗೆ, ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದರು.
Scaf idre school,clg ge schoolge hogli illadre namma ulamagalu madrsadalli school,clg nadesli ….in shaa Allah
Dheen bittu namage shiskhana beda…