ಬೆಂಗಳೂರು,ಜ.30- ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗಿದೆ. ಹೀಗಾಗಿ ಹಲವು ವಲಯಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
ನಾಳೆಯಿಂದ ಯಾವುದಕ್ಕೆ ರಿಲೀಫ್ ?
- ನಾಳೆಯಿಂದ ರಾತ್ರಿ ಕರ್ಫ್ಯೂ ಇಲ್ಲ
- ಸಿಲಿಕಾನ್ ಸಿಟಿಯಲ್ಲಿ ಶಾಲೆ, ಕಾಲೇಜುಗಳ ಪುನರ್ ಆರಂಭ
- ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್ ಗಳಲ್ಲಿ 100 ಸೀಟಿಂಗ್ ಗೆ ಅವಕಾಶ.
- ಮೆಟ್ರೋ , ಬಸ್ ಗಳಲ್ಲಿ ಎಲ್ಲಾ ಸೀಟ್ ಗಳನ್ನು ತುಂಬಿಸಬಹುದು.
- ಸರ್ಕಾರಿ ಕಛೇರಿಗಳಲ್ಲಿ ಶೇ. 100ರಷ್ಟು ಸಿಬ್ಬಂದಿ ಕೆಲಸಕ್ಕೆ ಅವಕಾಶ
ನಾಳೆಯಿಂದ ಯಾವುದಕ್ಕೆಲ್ಲ ನಿರ್ಬಂಧ ಮುಂದುವರಿಕೆ..?
- ಥಿಯೇಟರ್ ಗಳು, ರಂಗಮಂದಿರಗಳು,
- ಆಡಿಟೋರಿಯಂಗಳಲ್ಲಿ 50-50 ರೂಲ್ಸ್
- ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಹಾಗೂ ಸೇವೆಗೆ 50-50 ರೂಲ್ಸ್
- ರಾಜಕೀಯ ರ್ಯಾಲಿ, ಧರಣಿ, ಸಮಾವೇಶ, ಪ್ರತಿಭಟನೆಗಳಿಗೆ ಅವಕಾಶವಿಲ್ಲ
- ಸ್ವಿಮ್ಮಿಂಗ್ ಪೂಲ್, ಜಿಮ್ ಗಳಲ್ಲಿ 50-50 ರೂಲ್ಸ್
- ಸ್ಪೋಟ್ಸ್ ಕಾಂಪ್ಲೆಕ್ಸ್ ಮತ್ತು ಕ್ರೀಡಾಂಗಣಗಳಲ್ಲಿ 50 -50 ರೂಲ್ಸ್
ಬಾರ್, ಪಬ್, ಹೋಟೆಲ್, ರೆಸ್ಟೋರೆಂಟ್ ಗಳಿಗೆ 100% ಅವಕಾಶ ನೀಡಲಾಗಿದೆ. ಆದರೆ, ಕಲ್ಯಾಣ ಮಂಟಪಗಳಿಗೆ ಗಾತ್ರಕ್ಕೆ ಅನುಗುವಾಗಿ 50% ಅವಕಾಶ ನೀಡುವಂತೆ ಕಲ್ಯಾಣ ಮಂಟಪ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸ್ವಿಮ್ಮಿಂಗ್ ಮಾಲೀಕರು ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣ ಹಚ್ಚಿದೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಬಾಡಿಗೆ, ವಿದ್ಯುತ್, ಬಿಲ್, ನೀರಿನ ಬಿಲ್, ಟ್ಯಾಕ್ಸ್, ಜಿಎಸ್ ಟಿ ಯಾವುದರಿಂದಲೂ ರಿಯಾಯಿತಿಯೇ ಇಲ್ಲ. ಕಳೆದ ಎರಡು ವರ್ಷಗಳಿಂದಲೂ ಹೀಗೇ ಆಗ್ತಿದೆ. ಕೋವಿಡ್ ಹೆಚ್ಚಾದ್ರೆ ಮೊದಲು ಕ್ಲೋಸ್ ಆಗೋದು ಸ್ವಿಮ್ಮಿಂಗ್ ಪೂಲ್. ಕೊನೆಯಲ್ಲಿ ತೆರವಾಗೋದು ಕೂಡ ಸ್ವಿಮ್ಮಿಂಗ್ ಉದ್ಯಮ. ಹೀಗಾಗಿ ಟ್ರೈನರ್ಸ್ ಗೆ ಸಂಬಳ, ಪೂಲ್ ನಿರ್ವಹಣೆ ಕಷ್ಟ ಸಾಧ್ಯ ಮಾಲೀಕರು ಹೇಳ್ತಿದ್ದಾರೆ.
ಇತ್ತ ಸ್ವಿಮ್ಮರ್ಸ್ ಕೂಡ ಇತರೆ ಪಾಟ್ನರ್ಸ್ ಬಾರದೆ ಇರೋದಕ್ಕೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಮೊದಲು 100% ಇದ್ದಾಗ ಎಲ್ರೂ ಬರ್ತಾ ಇದ್ರು. ಈಗ ಕೋವಿಡ್ ಭಯದಿಂದ ಯಾರೂ ಬರ್ತಿಲ್ಲ. 50% ರೂಲ್ಸ್ ಸಡಿಲಿಕೆ ಮಾಡಿ ಅಂತ ಮನವಿ ಮಾಡಿಕೊಳ್ತಿದ್ದಾರೆ.
ಜಿಮ್ ಮಾಲೀಕರಿಂದಲೂ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಎಲ್ಲ ಉದ್ಯಮಗಳಂತೆ ನಮಗೂ ಅನುಮತಿ ಕೊಡಿ. ಕೋವಿಡ್ ನಿಯಮ ಪಾಲಿಸಿ ಜಿಮ್ ಗಳನ್ನ ತೆರೆಯುತ್ತೇವೆ. ನಿರಂತರ ಜಿಮ್ ಇಲ್ಲದಿದ್ದರೆ 50:50 ರೂಲ್ಸ್ ಇಲ್ಲದಿದ್ದರೆ ಕಷ್ಟ ಆಗುತ್ತೆ. ಇತ್ತ ಅಡ್ಮಿಷನ್ ಕೂಡ ಆಗ್ತಿಲ್ಲ ಅಂತ ಬೇಸರ ಹೊರ ಹಾಕುತ್ತಿದ್ದಾರೆ.
ಒಟ್ನಲ್ಲಿ ನಾಳೆಯಿಂದ ಹೊಸ ರೂಲ್ಸ್ ಜಾರಿಯಾಗ್ತಿದೆ. ಕರುನಾಡು ಫುಲ್ ಫ್ರೀಯಾಗ್ತಿದೆ. ಆದ್ರೆ, ಕಟ್ಟುಪಾಡುಗಳಿಗೆ ರಿಲೀಫ್ ಸಿಕ್ಕಿದ್ರೂ, ಸಿನಿ ರಂಗಕ್ಕೆ ರಿಲೀಫ್ ಸಿಕ್ಕಿಲ್ಲ. ಸ್ವಿಮ್ಮಿಂಗ್ ಪೂಲ್, ಜಿಮ್ ಸೇರಿದಂತೆ ಕಲ್ಯಾಣ ಮಂಟಪಗಳನ್ನ ಸರ್ಕಾರ ಕಡೆಗಣಿಸುತ್ತಿದೆ ಎಂಬ ಆಕ್ರೋಶ ಕೇಳಿ ಬರ್ತಿದೆ. ಹೀಗಾಗಿ ನಾಳೆ ಮ್ಯಾರೇಜ್ ಅಸೋಸಿಯೇಷನ್ ಸಿಎಸ್ ನ ಭೇಟಿ ಮಾಡ್ತಿದ್ದಾರೆ. ಅವರ ಬೇಡಿಕೆಗೆ ಸ್ಪಂದಿಸದೇ ಹೋದ್ರೆ, ಕೋರ್ಟ್ ಕದ ತಟ್ಟೋಕೆ ಮುಂದಾಗಿದ್ದಾರೆ.
ಪಬ್, ಬಾರ್, ರೆಸ್ಟೋರೆಂಟ್ ಗೆ ಶೇ.100 ಸೀಟು ಭರ್ತಿಗೆ ಓಕೆ. ಆದರೆ ಥಿಯೇಟರ್, ಕಲ್ಯಾಣ ಮಂಟಪಕ್ಕೆ ಪೂರ್ತಿ ಅವಕಾಶ ಇಲ್ಲ ಯಾಕೆ?
ಜಿಮ್, ಸ್ವಿಮ್ಮಿಂಗ್ ಪೂಲ್ ನವರಿಗೂ ನಿರಾಸೆಯಿದೆ. ಸರ್ಕಾರದ ಈ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ನಟ ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರೆ, ಕಲ್ಯಾಣ ಮಂಟಪಕ್ಕೆ ನೂರು ಜನ ಹೆಚ್ಚು ಸೇರಲು ಅವಕಾಶ ನೀಡಿದೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಥಿಯೇಟರ್ ಗೆ 100% ಆಕ್ಯುಪನ್ಸಿ ವಿಚಾರಕ್ಕೆ ಸಂಬಂಧಿಸಿದಂತೆ ನಟ ಶಿವರಾಜ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ. ನಾವು ಕೊರೊನಾ ಜೊತೆ ಜೊತೆಯೇ ಬದುಕಬೇಕಾಗಿದೆ. ಎಲ್ಲ ಕ್ಷೇತ್ರಗಳಿಗೂ 50:50 ನಿಯಮದಿಂದ ವಿನಾಯಿತಿ ಸಿಕ್ಕಿದೆ. ಚಿತ್ರಮಂದಿರಗಳಿಗೆ ಮಾತ್ರ ಏಕೆ ರಿಲ್ಯಾಕ್ಸ್ ಕೊಟ್ಟಿಲ್ಲ ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರನ್ನ ಭೇಟಿಯಾಗಿ ಮನವಿ ಮಾಡುತ್ತೇನೆ ಅಂತ ಮೈಸೂರಿನಲ್ಲಿ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಕಲ್ಯಾಣ ಮಂಟಪ ಮಾಲೀಕರ ಸಂಘ ಸಭೆ ನಡೆಸಿ ಚರ್ಚೆ ನಡೆಸಿದರು. ನಾಳೆ ಸಿಎಂ ಬೊಮ್ಮಾಯಿ ಭೇಟಿಗೆ ಮುಂದಾಗಿದ್ದಾರೆ. ಒಂದು ವೇಳೆ ಸಿಎಂ ಹೆಚ್ಚುವರಿ ಅವಕಾಶ ನೀಡದಿದ್ದರೆ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ 50-50 ರೂಲ್ಸ್ ಕೆಲವರಿಗೆ ವಿನಾಯಿತಿ ಕೊಟ್ಟು ಕೆಲವು ವಲಯಗಳಿಗೆ ನಿರ್ಬಂಧ ವಿಧಿಸಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕೊರೊನಾ ಕಾಲದಲ್ಲಿ ಜೀವ- ಜೀವನ ಎರಡು ನಿರ್ವಹಣೆಯನ್ನು ಸರ್ಕಾರ ಮಾಡಲೇಬೇಕಿದೆ







